ADVERTISEMENT

ಬೆಳಗಾವಿ | ಕನ್ನಡ ಸಾಹಿತ್ಯ ಪರಿಷತ್ತು: ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 12:53 IST
Last Updated 4 ಫೆಬ್ರುವರಿ 2022, 12:53 IST

ಬೆಳಗಾವಿ: ‘ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.

‘ಜಿಲ್ಲಾ ಘಟಕದ ಗೌರವ ಕಾರ‍್ಯದರ್ಶಿಗಳಾಗಿ ಮಹಾಂತೇಶ ಮೆಣಶಿನಕಾಯಿ, ಸುನೀಲ್ ಎನ್. ಹಲವಾಯಿ, ಕೋಶಾಧ್ಯಕ್ಷರಾಗಿ ರತ್ನಪ್ರಭಾ ವಿ. ಬೆಲ್ಲದ, ಮಹಿಳಾ ಪ್ರತಿನಿಧಿಗಳಾಗಿ ಜಯಶೀಲಾ ಬ್ಯಾಕೋಡ, ಪ್ರತಿಭಾ ಅಡಿವಯ್ಯ ಕಳ್ಳಿಮಠ, ಪರಿಶಿಷ್ಟ ಜಾತಿ (ಎಸ್.ಸಿ) ಪ್ರತಿನಿಧಿಯಾಗಿ ಅವಳೆಕುಮಾರ, ಮಲ್ಲಿಕಾರ್ಜುನ ಸೆದೆಪ್ಪ ಕೋಳಿ, ಪರಿಶಿಷ್ಟ ಪಂಗಡ(ಎಸ್.ಟಿ) ಪ್ರತಿನಿಧಿಯಾಗಿ ಎಫ್.ವೈ. ತಳವಾರ’.

‘ಸಂಘ ಸಂಸ್ಥೆ ಪ್ರತಿನಿಧಿಯಾಗಿ ಚನ್ನಪ್ಪ ಘಟಿಗೆಪ್ಪ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಗುರುನಾಥ ಕಡಬೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗಡಿ ಜಿಲ್ಲಾ ಘಟಕ ವಿಶೇಷ ಪ್ರತಿನಿಧಿಯಾಗಿ ವಿದ್ಯಾವತಿ ಆರ್. ಜನವಾಡೆ, ವೀರಭದ್ರ ಅಂಗಡಿ, ವಿಶೇಷ ಆಹ್ವಾನಿತ ಗಣ್ಯರಾಗಿ ಆಕಾಶ ಥಬಾಜ, ಶಿವಾನಂದ ತಲ್ಲೂರ, ಪದ್ಮರಾಜ ವೈಜಣ್ಣವರ, ಮಹಾದೇವ ಬಳಿಗಾರ, ಡಾ.ಜಗದೀಶ ಹಾರುಗೊಪ್ಪ, ಅಪ್ಪಾಸಾಹೇಬ ಅಲಿಬಾದಿ, ಜಯಶ್ರೀ ನಿರಾಕಾರಿ, ಭಾರತಿ ಮಠದ, ರೋಹಿಣಿ ಯಾದವಾಡ, ಸುಧಾ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷರು: ಬೆಳಗಾವಿ– ಸುರೇಶ ಹಂಜಿ, ಹುಕ್ಕೇರಿ– ಪ್ರಕಾಶ ಅವಲಕ್ಕಿ, ಖಾನಾಪುರ– ಬಸಪ್ರಭು ಹಿರೇಮಠ, ರಾಮದುರ್ಗ– ಪಾಂಡುರಂಗ ಜಟಗನ್ನವರ, ಗೋಕಾಕ– ಭಾರತಿ ಮದಭಾವಿ, ಸವದತ್ತಿ– ಡಾ.ಯಲ್ಲಪ್ಪ ಯಾಕೊಳ್ಳಿ, ಬೈಲಹೊಂಗಲ– ನಿಂಗಪ್ಪ ಠಕ್ಕಾಯಿ, ಚಿಕ್ಕೋಡಿ– ಡಾ.ಸುರೇಶ ಬಸಲಿಂಗಪ್ಪ ಉಕ್ಕಲಿ, ನಿಪ್ಪಾಣಿ– ಈರಣ್ಣ ಶಿರಗಾವಿ, ಕಾಗವಾಡ– ಡಾ.ಶಿದಗೌಡ ಕಾಗೆ, ಕಿತ್ತೂರ– ಡಾ.ಶ್ರೀಕಾಂತ ದಳವಾಯಿ, ರಾಯಬಾಗ– ರವೀಂದ್ರ ಪಾಟೀಲ, ಯರಗಟ್ಟಿ– ತಮ್ಮಣ್ಣ ಕಾಮಣ್ಣವರ, ಅಥಣಿ– ಮಲ್ಲಿಕಾರ್ಜುನ ಕನಶೆಟ್ಟಿ, ಮೂಡಲಗಿ–ಡಾ.ಸಂಜಯ ಸಿಂದಿಹಟ್ಟಿ ನೇಮಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.