ಬೆಳಗಾವಿ: ‘ಇಲ್ಲಿನ ಅರಿಹಂತ್ ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದಿಂದ, ನಗರದಲ್ಲಿ ವಿವಿಧ ವೈದ್ಯಕೀಯ ಕೋರ್ಸ್‌ಗಳ ಕಾಲೇಜು ಆರಂಭಿಸಲಾಗಿದೆ. ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ’ ಎಂದು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ.ದೀಕ್ಷಿತ್ ತಿಳಿಸಿದರು.
ಆಸ್ಪತ್ರೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಿಹಂತ್ ಭೌತಿಕ ಚಿಕತ್ಸೆ (ಫಿಜಿಯೊಥೆರಪಿ) ಕಾಲೇಜು (40 ಸೀಟು), ಅರಿಹಂತ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ಬಿಎಸ್‌ಸಿ, ಕಾರ್ಡಿಯಾಕ್ ಕೇರ್ (20 ಸೀಟು), ಆಪರೇಷನ್ ಥೇಟರ್ ತಂತ್ರಜ್ಞ (20 ಸೀಟು), ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬರೊಟರಿ ಟೆಕ್ನಾಲಜಿ (20 ಸೀಟು) ಹಾಗೂ ಅರಿಹಂತ್ ನರ್ಸಿಂಗ್ ಸೈನ್ಸ್ ಕಾಲೇಜು (60 ಸೀಟು) ಆರಂಭಿಸಲಾಗುತ್ತಿದೆ’ ಎಂದರು.
‘ನಮ್ಮ ಸಂಸ್ಥೆಯಿಂದ ಈಗಾಗಲೇ ಹೃದ್ರೋಗ ಚಿಕಿತ್ಸೆಯಲ್ಲಿ ಡಿಎನ್‌ಬಿ ಕೋರ್ಸ್ ಆರಂಭಿಸಲಾಗಿದೆ. 2025–26ನೇ ಸಾಲಿನಿಂದ ಹೊಸ ಕೋರ್ಸ್‌ಗಳ ಕಾಲೇಜು ತೆರೆಯಲಾಗುತ್ತಿದೆ. ಈ ಎಲ್ಲ ಕಾಲೇಜುಗಳು ಬೆಳಗಾವಿಯ ರಾಮತೀರ್ಥ ನಗರದಲ್ಲಿ ಅಭಿವೃದ್ಧಿ ಪಡಿಸಿದ ಕ್ಯಾಂಪಸ್‌ನಲ್ಲಿ ಆರಂಭವಾಗಲಿವೆ’ ಎಂದು ವಿವರಿಸಿದರು.
‘ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಮುಖ್ಯವಾಗಿ ಗುಣಮಟ್ಟದ ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ಹಾಗೂ ತಾಂತ್ರಿಕ ಕೌಶಲ ಹೊಂದಿದವರು ಬೇಕು. ವಿಶ್ವದಲ್ಲಿ ಈಗ ಫಿಜಿಯೊಥೆರಪಿ, ನರ್ಸಿಂಗ್ ಹಾಗೂ ಪ್ರಯೋಗಾಲಯ ಸಿಬ್ಬಂದಿಗೆ ಹೆಚ್ಚು ಬೇಡಿಕೆ ಇದೆ. ಮುಖ್ಯವಾಗಿ ಭಾರತದಲ್ಲಿ ಆರೋಗ್ಯಕರ ಭವಿಷ್ಯಕ್ಕಾಗಿ ಇಂಥ ವೃತ್ತಿಪರರ ಅಗತ್ಯವಿದೆ. ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನೂತನ ಕಾಲೇಜುಗಳನ್ನ ತೆರೆಯಲಾಗುತ್ತಿದೆ’ ಎಂದು ಅವರು ತಿಳಿಸಿದರು.
‘ಸ್ಮಾರ್ಟ್ ತರಗತಿಗಳು, ನುರಿತ ಬೋಧಕ ವರ್ಗ, ಅತ್ಯಾಧುನಿಕ ಸೌಕರ್ಯ ಹೊಂದಿದ ಪ್ರಯೋಗಾಲಯ, ಉಚಿತ ವೈಫೈ, ಡಿಜಿಟಲ್ ಗ್ರಂಥಾಲಯ, ಗುಣಮಟ್ಟದ ಶಿಕ್ಷಣ ಹೀಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ದೀಕ್ಷಿತ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಘಟಕವಾದ ಅರಿಹಂತ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ. ಇಲ್ಲಿ ಅತ್ಯಾಧುನಿಕ ಆಪರೇಷನ್ ಥೇಟರ್, ಕ್ಯಾತ್‌ಲ್ಯಾಬ್, ಐಸಿಯು, ಐಟಿಯು ಸೇರಿ 100 ಹಾಸಿಗೆಗಳ ಬಹುಮಹಡಿ ಕಟ್ಟಡವೂ ಇದೆ’ ಎಂದರು.
ಆಸಕ್ತರು, ಹೆಚ್ಚಿನ ಮಾಹಿತಿಗೆ ಮೊ. 90361 02390 ಮೂಲಕ ಸಂಪರ್ಕಿಸಲು ಕೋರಿದರು.
ಕೌಶಲಭರಿತ ಯುವ ಸಮುದಾಯ ನಮ್ಮದೇ ದೇಶದಲ್ಲಿ ಸೇವೆ ಸಲ್ಲಿಸಬೇಕು ಅವರ ಪ್ರತಿಭೆ ಪಲಾಯಣವಾಗಬಾರದು. ಈ ಗುರಿಯೊಂದಿಗೆ ನಾವು ಕಾಲೇಜು ಆರಂಭಿಸುತ್ತಿದ್ದೇವೆಡಾ.ಎಂ.ಡಿ.ದೀಕ್ಷಿತ್ ವೈದ್ಯಕೀಯ ನಿರ್ದೇಶಕ ಅರಿಹಂತ್ ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.