ಸಾವು
(ಪ್ರಾತಿನಿಧಿಕ ಚಿತ್ರ)
ಅಥಣಿ: ಇಲ್ಲಿನ ಜಮಖಂಡಿ ರಸ್ತೆಯ ಘಟನಟ್ಟಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಾಲಕ, ಮೋಳೆ ಗ್ರಾಮದ ರಾಹುಲ ಸುರೇಂದ್ರ ಹುಂಡೆಕರ್‌ನನ್ನು ಬಂಧಿಸಲಾಗಿದೆ.
ಅಗಸ್ತ್ಯಾ ವಿಜಯ ಕನಮಡಿ (10) ಮೃತ. ಘಟನಟ್ಟಿ ಕ್ರಾಸ್ ಬಳಿ ತೋಟದ ಮನೆಯಲ್ಲಿ ವಾಸವಿದ್ದ ಬಾಲಕ ಬೆಂಗಳೂರಿಗೆ ತೆರಳಿದ ಮಾವನನ್ನು ಕಳುಹಿಸಿಕೊಡಲು ಬಸ್ ನಿಲ್ದಾಣಕ್ಕೆ ಬಂದಿದ್ದ. ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.