ADVERTISEMENT

ಅಥಣಿ: ಮುಂದವರಿದ ಪ್ರವಾಹ ಪರಿಸ್ಥಿತಿ

ಅಥಣಿ: ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:15 IST
Last Updated 27 ಜುಲೈ 2021, 4:15 IST
ಅಥಣಿ ಸಮೀಪದ ಹಿಪ್ಪರಗಿ ಆಣೆಕಟ್ಟಿನಿಂದ 22 ಗೇಟ್‌ಗಳ ಮೂಲಕ ನೀರು ಹರಿಸಲಾಯಿತು
ಅಥಣಿ ಸಮೀಪದ ಹಿಪ್ಪರಗಿ ಆಣೆಕಟ್ಟಿನಿಂದ 22 ಗೇಟ್‌ಗಳ ಮೂಲಕ ನೀರು ಹರಿಸಲಾಯಿತು   

ಅಥಣಿ: ಅಥಣಿ ತಾಲ್ಲೂಕಿನ 22 ಹಳ್ಳಿಗಳು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ಸಪ್ತಸಾಗರ, ಹುಲಗಬಾಳಿ, ತಿರ್ಥ, ನದಿಇಂಗಳಗಾವ , ಅವರಖೋಡ ,ದೋಡವಾಡ, ಜನವಾಡ, ಸವದಿ, ಮಹೇಶವಾಡಗು ಹಳ್ಳಿಗಳು ಮುಳುಗಡೆ ಹಂತಕ್ಕೆ ಬಂದ್ದಿದು ಗ್ರಾಮಸ್ಥರು ಸಂಪೂರ್ಣವಾಗಿ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಶೇಡ್‌ ನಿರ್ಮಾಣಕ್ಕೆ ಹಿಂದೇಟು: ಮಹೇವಾಡಗಿ, ನಂದೇಶ್ವರ, ಜನವಾಡ ಗ್ರಾಮಸ್ಥರಿರುವ ಸ್ಥಳವಾದ ಝೀರೊ ಪಾಯಿಂಟ್ ಬಳಿ ಪ್ರವಾಹ ಪೀಡಿತರಿಗೆ ಉಳಿದುಕೊಳ್ಳಲು ಶೆಡ್ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಹಿಂದೇಟು ಹಾಕುತ್ತಿದೆ.

ADVERTISEMENT

‘ನಾಳೆ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಶೇಡ್‌ ನಿರ್ಮಾಣ ಮಾಡಿ ಏನು ಮಾಡುವುದಿದೆ, ಒಂದು ದಿನಕ್ಕೋಸ್ಕರ ಯಾಕೆ ಶೇಡ್‌ ನಿರ್ಮಾಣ ಮಾಡೋಣ‘ ಎನ್ನುತ್ತಿದ್ದಾರೆ. ಕಳೆದ ಬಾರಿ ಪ್ರವಾಹ ಬಂದಾಗ ಇದೇ ಸ್ಥಳಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಶೆಡ್ ನಿರ್ಮಾಣ ಮಾಡಿ ಪ್ರವಾಹ ಪೀಡಿತ ಮೂರು ಗ್ರಾಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಶಾಸಕರ ಭೇಟಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಮಹೇಶ ಕುಮಠಳ್ಳಿ ಹಾಗೂ ಚಿಕ್ಕೋಡಿ ಎಸಿ ಭೇಟಿ ನೀಡಿದರು. ಈ ವೇಳೆ ತಾಲ್ಲೂಕು ಆಡಳಿತಕ್ಕೆ ಶೀಘ್ರವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಬೇಕು. ಆಸ್ಪತ್ರೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲೂ ಸೂಚಿಸದರು.

ಖಾಸಗಿ ವೈದರಿಂದ ಸಹಾಯ: ಪ್ರವಾಹ ಪರಿಸ್ಥಿತಿ ಎದುರಿಸಿ ಬಂದ ಸಾರ್ವಜನಿಕರಿಗೆ ಕೆಲವು ಚಿಕ್ಕ ಪುಟ್ಟ ಗಾಯಗಳಾಗಿದ್ದವು, ಗಂಜಿ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಖಾಸಗಿ ವೈದ್ಯರಾದ ಶ್ರೀಶೈಲ ಚೌಗಲಾ ಉಚಿತ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.