ADVERTISEMENT

ಅಥಣಿ: ಶಿವಾನಂದ, ಭಾರತಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:54 IST
Last Updated 20 ಅಕ್ಟೋಬರ್ 2024, 15:54 IST
ಅಥಣಿಯ ಹೊಸಟ್ಟಿ ಗ್ರಾಮದ ಸಿದ್ದೇಶ್ವರ ಪಿಕೆಪಿಎಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ನಾಯಿಕ ಅವರು ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿದರು
ಅಥಣಿಯ ಹೊಸಟ್ಟಿ ಗ್ರಾಮದ ಸಿದ್ದೇಶ್ವರ ಪಿಕೆಪಿಎಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ನಾಯಿಕ ಅವರು ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿದರು   

ಅಥಣಿ: ತಾಲ್ಲೂಕಿನ ಹೊಸಟ್ಟಿಯ ಸಿದ್ಧೇಶ್ವರ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಶಿವಾನಂದ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಭಾರತಿ ಹಲ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ಪ್ರಸಕ್ತ ವರ್ಷ 30 ಸಹಕಾರ ಸಂಘಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಗಳಲ್ಲಿ ಎಲ್ಲ ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರೇ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು .

ನೂತನ ಅದ್ಯಕ್ಷ ಶಿವಾನಂದ ನಾಯಿಕ ಮಾತನಾಡಿ, ‘ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಸೊಸೈಟಿ ಮುನ್ನಡೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪಾರದರ್ಶಕ ಆಡಳಿತ ನೀಡಿತ್ತೇವೆ’ ಎಂದು ಹೇಳಿದರು .

ADVERTISEMENT

ಗ್ರಾಮದಲ್ಲಿ ಪಟಾಕಿ ಸಿಡಿಸಿ, ಗುಲಾಲ ಎರಚಿ ವಿಜಯೋತ್ಸವ ಆಚರಿಸಲಾಯಿತು. ಚುನಾವಣಾದಿಕಾರಿಯಾಗಿ ಆಶಾ ಬಿರಾದರ ಕಾರ್ಯ ನಿರ್ವಹಿಸಿದರು.

ಮುಖಂಡ ಶ್ರೀಶೈಲ ನಾಯಿಕ, ಹಣಮಂತ ನಾಯಿಕ, ಚಂದು ಪವಾರ, ಅಣ್ಣಪ್ಪಾ ನಾಯಿಕ, ರಾವಸಾಹೇಬ ನಾಯಿಕ, ರಾಜು ಹಣಮಾಪುರೆ, ನಿಂಗಪ್ಪ ಹಣಮಾಪುರೆ, ಕೃಷ್ಣಾ ಸರಗರ, ಪಾಂಡು ಹಲ್ಯಾಳ, ನೂರಾರು ಜನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.