
ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ 2023 ಮತ್ತು 2024ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ’ ಪುರಸ್ಕೃತರ ವಿವರ ಪ್ರಕಟಿಸಿದೆ.
2023ನೇ ಸಾಲಿನ ಪ್ರಶಸ್ತಿಗೆ ಕತೆ ಪ್ರಕಾರದಲ್ಲಿ ಕಾಸರಗೋಡಿನ ಗೋವಿಂದರಾಜು ಕಲ್ಲೂರ ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಮಂಗಳೂರಿನ ಫೌಝಿಯಾ ಸಲೀಮ್ ಅವರ ‘ನೀ ದೂರ ಹೋದಾಗ’ ಕೃತಿ ಆಯ್ಕೆಯಾಗಿವೆ.
2024ನೇ ಸಾಲಿನ ಕತೆ ಪ್ರಕಾರದಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ತೊಟ್ಟು ಕ್ರಾಂತಿ’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಬೆಂಗಳೂರಿನ ಜಯರಾಮಚಾರಿ ಅವರ ‘ಕಿಲಿಗ್’ ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ ತಲಾ ₹10 ಸಾವಿರ ನಗದು ಬಹುಮಾನ ಹೊಂದಿವೆ.
ಮಲ್ಲಿಕಾರ್ಜುನ ಹಿರೇಮಠ ಸ್ಥಾಪಿಸಿರುವ ದತ್ತಿನಿಧಿಯ ಬಸವರಾಜ ಕಟ್ಟೀಮನಿ ಆತ್ಮಕಥಾ ಪುಸ್ತಕ ಪ್ರಶಸ್ತಿಗೆ ಹುಬ್ಬಳ್ಳಿಯ ಅರುಣಕುಮಾರ ಹಬ್ಬು ಅವರ ‘ಬೊಗಸೆ ನೀರು’ ಕೃತಿ ಆಯ್ಕೆಯಾಗಿದೆ. ಇದು ₹20 ಸಾವಿರ ನಗದು ಬಹುಮಾನ ಒಳಗೊಂಡಿದೆ. ಧಾರವಾಡದಲ್ಲಿ ಜನವರಿ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.