ADVERTISEMENT

ಕನ್ನಡ ಸಾಹಿತ್ಯಕ್ಕೆ ಬಸವರಾಜ ಕಟ್ಟಿಮನಿ ಕೊಡುಗೆ ಅಪಾರ: ಡಾ.ಜೆ.ಪಿ.ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:52 IST
Last Updated 10 ಅಕ್ಟೋಬರ್ 2025, 2:52 IST
ಅಥಣಿಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಅಥಣಿಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಅಥಣಿ: ಅಥಣಿಯ ಜೆ.ಇ.ಸಂಸ್ಥೆಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಬೆಳಗಾವಿಯಿಂದ ಕಥೆ ಹೇಳೂಣು’ ಎಂಬ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಂತರ ಡಾ.ಜೆ.ಪಿ.ದೊಡ್ಡಮನಿ ಮಾತನಾಡಿ, ‘ಬಸವರಾಜ ಕಟ್ಟಿಮನಿ ಅವರ ಕಥೆ, ಕಾದಂಬರಿಗಳು ಸಾಮಾಜಿಕ, ರಾಜಕೀಯ ಹಾಗೂ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯ ವಸ್ತುವಿನೊಂದಿಗೆ ಮುಂದಿನ ಜನಾಂಗಕ್ಕೆ ಸಂದೇಶ  ನೀಡಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಬಸವರಾಜ ಅವರು ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

ಸ್ಪರ್ಧೆಯ ವಿಜೇತರಾದ  ಭವಾನಿ ಪಾಟೀಲ(ಪ್ರಥಮ), ಪೂಜಾ ಸಾಂಗ್ಲಿ (ದ್ವಿತೀಯ) ,
ಸಕ್ಕುಬಾಯಿ ನಿಂಗನೂರ್ (ತೃತೀಯ) ಅವರಿಗೆ ಬಹುಮಾನ  ವಿತರಿಸಲಾಯಿತು.

ADVERTISEMENT

ಜಿ.ಎಂ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎ.ಬಮನಾಳೆ, ಎನ್.ಬಿ.ಝರೆ, ಡಾ.ಮಹಾವೀರ ಕಾಳೆ, ಭಾರತಿ ಅಗಸರ, ಮನೋಜಕುಮಾರ ಆಕಾಶ, ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.