ADVERTISEMENT

‘ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ'

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:13 IST
Last Updated 13 ಏಪ್ರಿಲ್ 2024, 16:13 IST
ಗೋಕಾಕ ಮರಾಠಾ ಗಲ್ಲಿಯಲ್ಲಿ ನಡೆದ ಮತದಾನದ ಕುರಿತ ಜಾಗೃತಿ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರೆ ಮಾತನಾಡಿದರು
ಗೋಕಾಕ ಮರಾಠಾ ಗಲ್ಲಿಯಲ್ಲಿ ನಡೆದ ಮತದಾನದ ಕುರಿತ ಜಾಗೃತಿ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರೆ ಮಾತನಾಡಿದರು   

ಗೋಕಾಕ: ಮತದಾರರು ಯಾವುದೇ ಭಯ, ಭೀತಿ, ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರೆ ಮನವಿ ಮಾಡಿದರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ, ತಾ.ಪಂ. ಹಾಗೂ ನಗರಸಭೆ ಇವರ ನೇತ್ರತ್ವದಲ್ಲಿ ಗೋಕಾಕ ಮತಕ್ಷೇತ್ರ ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಭೆಗಳ ಭಾಗವಾಗಿ ಶನಿವಾರ ಗೋಕಾಕ ನಗರಸಭೆ ವ್ಯಾಪ್ತಿಯ ಮರಾಠಾ ಗಲ್ಲಿಯಲ್ಲಿ ನಡೆದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ತಾಲ್ಲೂಕಿನ ಸುಲಧಾಳ, ಅಂಕಲಗಿ, ಗುಜನಾಳ, ಕುಂದರಗಿ, ಗೊಡಚಿನಮಲ್ಕಿ, ಗೋಕಾಕ-ಪಾಲ್ಸ್, ಶಿಂಧಿಕುಬೇಟ ಮೊದಲಾದೆಡೆಗಳಲ್ಲೂ ನಡೆದ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳ ತಂಡ ಮತದಾರರಲ್ಲಿ ಮತ ಚಲಾಯಿಸಲು ಯಾವುದೇ ಭಯ ಬೇಡ ಎಂದರು.

ADVERTISEMENT

ಸಭೆಯಲ್ಲಿ ತಾಲ್ಲೂಕು ಚುನಾವಣಾ ಅಧಿಕಾರಿಗಳೂ ಆಗಿರುವ ತಹಶೀಲದಾರ ಡಾ. ಮೋಹನ ಭಸ್ಮೆ, ತಾ.ಪಂ. ಇಓ ಹಾಗೂ ಸೆಕ್ಟರ್ ಅಧಿಕಾರಿ ಜಾಹೀರ ಹಾಸನ್, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಕಂದಾಯ ನಿರೀಕ್ಷಕ ಶಿವಾನಂದ ಹಿರೇಮಠ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.