ADVERTISEMENT

ಬಸವೇಶ್ವರ ಸಹಕಾರ ಬ್ಯಾಂಕ್‌ಗೆ ₹ 1.16 ಕೋಟಿ ಲಾಭ: ಅಧ್ಯಕ್ಷ ರಮೇಶ ಕಳಸಣ್ಣವರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 12:50 IST
Last Updated 22 ಸೆಪ್ಟೆಂಬರ್ 2019, 12:50 IST
ಬೆಳಗಾವಿ ಬಸವೇಶ್ವರ ಸಹಕಾರ ಬ್ಯಾಂಕ್‌ ಪದಾಧಿಕಾರಿಗಳು ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು
ಬೆಳಗಾವಿ ಬಸವೇಶ್ವರ ಸಹಕಾರ ಬ್ಯಾಂಕ್‌ ಪದಾಧಿಕಾರಿಗಳು ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು   

ಬೆಳಗಾವಿ: ‘ಬೆಳಗಾವಿ ಬಸವೇಶ್ವರ ಸಹಕಾರ ಬ್ಯಾಂಕ್‌ 10 ಶಾಖೆಗಳನ್ನು ಹೊಂದಿದೆ. 2018–19ನೇ ಸಾಲಿನಲ್ಲಿ ₹ 145.04 ಕೋಟಿ ಠೇವಣಿ ಸಂಗ್ರಹಿಸಿ, ₹ 99.26 ಕೋಟಿ ಸಾಲ ವಿತರಿಸಿದೆ. ₹ 1.16 ಕೋಟಿ ಲಾಭ ಗಳಿಸಿ, ಸಶಕ್ತ ಬ್ಯಾಂಕಿಂಗ್ ಸಂಸ್ಥೆಯಾಗಿ ಹೊರಹೊಮ್ಮಿದೆ’ ಎಂದು ಅಧ್ಯಕ್ಷ ರಮೇಶ ಕಳಸಣ್ಣವರ ತಿಳಿಸಿದರು.

ಭಾನುವಾರ ನಡೆದ ಬ್ಯಾಂಕ್‌ನ 56ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಉದ್ಯೋಗ, ವ್ಯಾಪಾರ, ಗೃಹನಿರ್ಮಾಣ, ಶಿಕ್ಷಣ ಉದ್ದೇಶಕ್ಕೆಂದು ಸಾಲ ನೀಡಿದ್ದೇವೆ. ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ನೆರವಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸೇವೆಗಳನ್ನು ನೀಡಲು ಯೋಜಿಸಲಾಗಿದೆ’ ಎಂದರು.

ADVERTISEMENT

10 ವರ್ಷಗಳಿಂದ ಸದಸ್ಯತ್ವ ಹೊಂದಿರುವ 75 ವರ್ಷ ವಯಸ್ಸಿನ 30 ಮಂದಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. 25 ಮಂದಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು, ಪದವಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷ ರಮೇಶ ಎಸ್. ಸಿದ್ದಣ್ಣವರ, ನಿರ್ದೇಶಕರಾದ ಬಾಳಪ್ಪ ಕಗ್ಗಣಗಿ, ವಿಜಯಕುಮಾರ್‌ ಅಂಗಡಿ, ಅಶೋಕ ಹುಕ್ಕೇರಿ, ಪ್ರಕಾಶ ಬಾಳೇಕುಂದ್ರಿ, ಗಿರೀಶ್ ಬಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.