
ಸವದತ್ತಿ: ಕೆಎಲ್‌ಇ ಸಂಸ್ಥೆಯ ಇಲ್ಲಿನ ಬೆಳ್ಳುಬ್ಬಿ ಕಾಲೇಜು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಿಂದ ಜರುಗಿದ ಏಕ ವಲಯ ಅಂತರ್ ಕಾಲೇಜುಗಳ ಎರಡು ದಿನಗಳ ಮಹಿಳೆಯರ ಕೊಕ್ಕೊ ಆಯ್ಕೆ ಪ್ರಕ್ರಿಯೆ ಹಾಗೂ ಪಂದ್ಯಾವಳಿ ಮಾರೋಪದಲ್ಲಿ ಬೆಳಗಾವಿಯ ಬಿ.ಕೆ. ಕಾಲೇಜು ಪ್ರಥಮ, ಸವದತ್ತಿಯ ಬೆಳ್ಳುಬ್ಬಿ ಕಾಲೇಜು ದ್ವಿತೀಯ ಮತ್ತು ರಾಮದುರ್ಗದ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದವು.
ಬೆಳ್ಳುಬ್ಬಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ್ ಬಾಳಿ ಮಾತನಾಡಿ, ‘ಕಬಡ್ಡಿ, ಕೊಕ್ಕೊ, ವಾಲಿಬಾಲ್, ಫುಟ್‌ಬಾಲ್, ಕ್ರಿಕೆಟ್‌ಗಳಂತಹ ಕ್ರೀಡೆಗಳಿಗೆ ದೈಹಿಕ ಶ್ರಮವೇ ಆದ್ಯತೆಯಾಗಿದೆ. ಕ್ರೀಡಾಪಟುವಿಗೆ ದೇಹ ಮತ್ತು ಮನಸ್ಸು ಎರಡೂ ಒಮ್ಮತದಿಂದ ಕರ್ತವ್ಯ ನಿರ್ವಹಿಸಿದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕಾರಣ ಕ್ರೀಡಾಪಟುಗಳು ತಮ್ಮ ಆರೋಗ್ಯ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಎನ್.ಆರ್. ಸವತಿಕರ, ಪೂರ್ಣಿಮಾ ಹುಡೇದ, ಕಾಶವ್ವ ನಾಯ್ಕರ, ಪ್ರೊ.ಕೆ. ರಾಮರೆಡ್ಡಿ, ಐಕ್ಯೂಎಸಿ ಸಂಯೋಜಕ ವಿ.ಎಸ್. ಮೀಶಿ, ಗೀತಾ ಮಲ್ಲಾಪೂರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಶಿವಾನಂದ ಹೊಳಿ, ಬಸವರಾಜ ಪುಟ್ಟಿ, ಎ.ಎಫ್. ಬದಾಮಿ, ಡಾ. ಎನ್.ಎ. ಕೌಜಗೇರಿ, ಎ.ಎ. ಹಳ್ಳೂರ, ಅಶೋಕ ಪಮ್ಮಾರ, ಬಿ.ಬಿ. ಕಬಾಡಗಿ, ಎಚ್.ಎನ್. ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.