
ಬೆಳಗಾವಿ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಖಾಸಗಿ ಬಸ್‌ಗಳಿಗೆ ಮೂರು ಪ್ರತ್ಯೇಕ ಸ್ಥಳದಲ್ಲಿ ಶೆಲ್ಟರ್‌ಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿದ ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರು, ಪ್ರಯಾಣಿಕರನ್ನು ಕರೆದೊಯ್ಯಲು ಹಾಗೂ ತಂದು ಇಳಿಸಲು ಇದೇ ಸ್ಥಳಗಳನ್ನು ಬಳಸಬೇಕು. ಜ.27ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದೂ ಸೂಚಿಸಿದ್ದಾರೆ.
ಈಗಾಗಲೇ ನಗರದ ಸಂಗೊಳ್ಳಿ ರಾಯಣ್ಣ (ಆರ್‌ಟಿಒ) ವೃತ್ತ, ತ್ರಿವೇಣಿ ಹೊಟೇಲ್, ರಾಮದೇವ ಹೊಟೇಲ್, ಧರ್ಮವೀರ ಸಂಭಾಜಿ ವೃತ್ತ ಕಡೆಗಳಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಪಿಕಪ್ ಹಾಗೂ ಡ್ರಾಪ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಸರ್ವಾಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. ಹೀಗಾಗಿ, ಹೊಸ ಸ್ಥಳ ಗುರುತಿಸಲಾಗಿದೆ.
ನಿಲುಗಡೆ ನಿಷೇಧ: ಅಲ್ಲದೇ, ನಗರದ ತ್ರಿವೇಣಿ ಹೊಟೇಲ್‌ನಿಂದ ಕೇಂದ್ರ ಬಸ್ ನಿಲ್ದಾಣದ ಸರ್ಕಲ್‌ವರೆಗೆ ಮತ್ತು ಕೀರ್ತಿ ಹೊಟೇಲ್ ಕ್ರಾಸ್‌ನಿಂದ ಸಂಗೊಳ್ಳಿ ರಾಯಣ್ಣ (ಆರ್‌ಟಿಒ) ವೃತ್ತದವರೆಗೆ ಎರಡೂ ಬದಿಯ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ವಾಹನಗಳನ್ನು ನಿಲುಗಡೆಯನ್ನು ನಿಷೇಸಲಾಗಿದೆ.
ಅದರಂತೆ ಕೃಷ್ಣದೇವರಾಯ (ಕೊಲ್ಹಾಪುರ) ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿ ಕ್ರಾಸ್‌ವರೆಗೆ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ದಿನ ಬಿಟ್ಟು ದಿನ ಸಮ– ಬೆಸ ಸಂಖ್ಯೆಯ ದಿನಾಂಕಗಳಂತೆ ಎರಡೂ ಬದಿಯಲ್ಲಿ ವಾಹನಗಳನ್ನು ನಿಡುಗಡೆ ಮಾಡಲು ಆದೇಶಿಸಲಾಗಿರುತ್ತದೆ.
ಭಾರಿ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರ ಹಾಗೂ ಮಕ್ಕಳ ಓಡಾಟದ ಹಿತದೃಷ್ಟಿಯಿಂದ ನಗರದಲ್ಲಿ ಭಾರಿ ವಾಹನಗಳ ಸಂಚಾರ ಸಮಯವನ್ನು ಬದಲಾವಣೆ ಮಾಡಲಾಗಿದೆ.
ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದಾಗಿ ಅಪಘಾತಗಳು ಸಂಭವಿಸಿ ಜೀವಹಾನಿ ಉಂಟಾಗುತ್ತಿದೆ. ಶಾಲೆ, ಕಾಲೇಜು, ಕಚೇರಿ ಪ್ರಾರಂಭ ಹಾಗೂ ಬಿಡುವಿನ ಸಮಯದಲ್ಲಿ ಶಾಲಾ ಮಕ್ಕಳ, ಪಾಲಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ 7ರಿಂದ ಬೆಳಿಗ್ಗೆ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಸಲಾಗಿದೆ.
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು. 2025ರಲ್ಲಿ ನೋ–ಎಂಟ್ರಿ ನಿಯಮ ಉಲ್ಲಘಿಸಿದ ವಾಹನ ಚಾಲಕರ ವಿರುದ್ಧ 1,001 ಪ್ರಕರಣಗಳನ್ನು ದಾಖಲಿಸಿ ₹4.17 ಲಕ್ಷ ದಂಡ ವಿಧಿಸಲಾಗಿದೆ. ಮುಂದೆಯೂ ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತಿದ್ದು, ಭಾರಿ ವಾಹನ ಚಾಲಕರು ಆದೇಶ ಅನುಸರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪೊಲೀಸ್ ಆಯುಕ್ತರ ಆದೇಶದಲ್ಲಿ ಸೂಚಿಸಲಾಗಿದೆ.
ಎಲ್ಲಿವೆ ಹೊಸ ಶೆಲ್ಟರ್‌ಗಳು
ಭರತೇಶ ಶಾಲೆ (ಪೇ-ಪಾರ್ಕಿಂಗ್) ಅಶೋಕ ನಗರ ಬೆಳಗಾವಿ ಒನ್ ಕೇಂದ್ರದ ಹಿಂದಿನ ಖಾಲಿ ಸ್ಥಳ (ಪೇ ಪಾರ್ಕಿಂಗ್) ಹಾಗೂ ಧರ್ಮನಾಥ ವೃತ್ತದಿಂದ ಅಶೋಕ ನಗರ ರಸ್ತೆಯಲ್ಲಿ ಈ ಮೂರು ಕಡೆಗಳಲ್ಲಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ. ಜ. 27ರಿಂದ ಎಲ್ಲ ಖಾಸಗಿ ಬಸ್ ಚಾಲಕರು ಗುರುತಿಸಲಾದ ಈ ಮೂರು ಸ್ಥಳಗಳಿಂದಲೇ ಪ್ರಯಾಣಿಕರನ್ನು ಪಿಕ್-ಅಪ್ ಹಾಗೂ ಡ್ರಾಪ್ ಮಾಡಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.