ADVERTISEMENT

ಬೆಳಗಾವಿ–ಚೆನ್ನೈ ನೇರ ವಿಮಾನ ಫೆ.2ರಿಂದ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 8:33 IST
Last Updated 9 ಜನವರಿ 2021, 8:33 IST

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಚೆನ್ನೈಗೆ ನೇರ ವಿಮಾನ ಕಾರ್ಯಾಚರಣೆ ಫೆ.2ರಿಂದ ಆರಂಭಗೊಳ್ಳಲಿದೆ.

‘ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ. ವಾರದಲ್ಲಿ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರ್ಯಾಚರಿಸಲಿದೆ. ಬೆಳಿಗ್ಗೆ 10.15ಕ್ಕೆ ಇಲ್ಲಿಗೆ ಬರುವ ವಿಮಾನ 10.55ಕ್ಕೆ ಚೆನ್ನೈಗೆ ತೆರಳಲಿದೆ’ ಎಂದು ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ತಿಳಿಸಿದರು.

ಈ ಹಿಂದೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. 2018ರಲ್ಲಿ ಸ್ಥಗಿತಗೊಂಡಿತ್ತು.

ADVERTISEMENT

ಪ್ರಸ್ತುತ, ಬೆಳಗಾವಿಯಿಂದ ಮೈಸೂರು ಮಾರ್ಗವಾಗಿ ಒಂದು ವಿಮಾನವಿದೆ. ಮುಂದಿನ ತಿಂಗಳಿಂದ ನೇರ ವಿಮಾನ ಆರಂಭಗೊಳ್ಳಲಿರುವುದರಿಂದ ಇಲ್ಲಿಂದ ಚೆನ್ನೈಗೆ ಕಾರ್ಯಾಚರಿಸುವ ವಿಮಾನಗಳ ಸಂಖ್ಯೆ 2ಕ್ಕೆ ಎರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.