ADVERTISEMENT

ಬೆಳಗಾವಿ: ಉಪವಿಭಾಗಾಧಿಕಾರಿ ಕಾರಿಗೆ ನೋಟಿಸ್‌ ಅಂಟಿಸಿದ ಸಂತ್ರಸ್ತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 16:12 IST
Last Updated 3 ಸೆಪ್ಟೆಂಬರ್ 2024, 16:12 IST
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿದ್ದ ಉಪವಿಭಾಗಾಧಿಕಾರಿ ವಾಹನಕ್ಕೆ ನೋಟಿಸ್‌ ಪ್ರತಿ ಅಂಟಿಸಿರುವುದು 
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿದ್ದ ಉಪವಿಭಾಗಾಧಿಕಾರಿ ವಾಹನಕ್ಕೆ ನೋಟಿಸ್‌ ಪ್ರತಿ ಅಂಟಿಸಿರುವುದು    

ಬೆಳಗಾವಿ: ಶಹಾಪುರದ ಹೈಬತ್ತಿ ಕಾಲೊನಿಯಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ, ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆಯವರು ಪರಿಹಾರ ನೀಡುವಂತೆ ಆಗ್ರಹಿಸಿ ಸಂತ್ರಸ್ತರೊಬ್ಬರು ಮಂಗಳವಾರ ಇಲ್ಲಿನ ಪಾಲಿಕೆ ಕಚೇರಿ ಆವರಣದಲ್ಲಿದ್ದ ಉಪವಿಭಾಗಾಧಿಕಾರಿಯ ವಾಹನಕ್ಕೆ ನೋಟಿಸ್‌ ಪ್ರತಿ ಅಂಟಿಸಿದರು.

‘ನಾನು ರಸ್ತೆ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಿದ್ದೇನೆ. ಆದರೆ, ಹಲವು ವರ್ಷಗಳಿಂದ ₹75.96 ಲಕ್ಷ ಪರಿಹಾರ ಕೊಟ್ಟಿಲ್ಲ. ಪರಿಹಾರ ನೀಡದಿದ್ದರೆ, ಪಾಲಿಕೆಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಹಾಗಾಗಿ ಪಾಲಿಕೆಯಲ್ಲಿನ ವಸ್ತುಗಳ ಜಪ್ತಿಗೆ ಬಂದಿರುವೆ’ ಎಂದು ನೇಮಾಣಿ ಜಾಂಗಳೆ ಹೇಳಿದರು.

‘ಈ ಪ್ರಕರಣದಲ್ಲಿ ಪರಿಹಾರ ನೀಡಲು ನ್ಯಾಯಾಲಯದ ಕಾಲಾವಕಾಶ ಕೇಳಿದ್ದೇವೆ. ಸೆ.4ರಂದು ಪ್ರಕರಣದ ವಿಚಾರಣೆ ಇದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.