ADVERTISEMENT

ಬೆಳಗಾವಿ: ಆಸ್ಪತ್ರೆ ಹೊರಗೇ ರೋಗಿ ಮಲಗಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 2:45 IST
Last Updated 21 ಆಗಸ್ಟ್ 2025, 2:45 IST
ಶಸ್ತ್ರಚಿಕಿತ್ಸೆಗೆ ಬುಧವಾರ ಬಂದಿದ್ದ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದ ಆವರಣದಲ್ಲಿ ಅರ್ಧ ತಾಸು ಮಲಗಿಸಲಾಯಿತು
ಶಸ್ತ್ರಚಿಕಿತ್ಸೆಗೆ ಬುಧವಾರ ಬಂದಿದ್ದ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದ ಆವರಣದಲ್ಲಿ ಅರ್ಧ ತಾಸು ಮಲಗಿಸಲಾಯಿತು   

ಬೆಳಗಾವಿ: ಕಾಲಿನ ಶಸ್ತ್ರಚಿಕಿತ್ಸೆಗೆ ಬಂದಿದ ಮಹಿಳೆಯೊಬ್ಬರನ್ನು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಹೊರಭಾಗದಲ್ಲಿ ಚಳಿಯಲ್ಲೇ ಅರ್ಧತಾಸು ಮಲಗಿಸಿದ ಘಟನೆ ನಡೆದಿದೆ.

ಕಾಲಿನ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯನ್ನು ಹೊಸ ಕಟ್ಟಡದಿಂದ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಬೇಕಾಗಿತ್ತು. ಆಂಬುಲೆನ್ಸ್‌ ಸಿದ್ಧಗೊಳಿಸುವ ಮುನ್ನವೇ ಸಿಬ್ಬಂದಿ, ಸ್ಟ್ರೆಚರ್‌ನಲ್ಲಿ ಮಹಿಳೆಯನ್ನು ಹೊರಗೆ ಕರೆತಂದರು. ಅಲ್ಲಿ ಆಂಬುಲೆನ್ಸ್‌ ಇಲ್ಲದ್ದನ್ನು ಕಂಡು ಅಲ್ಲಿಯೇ ಬಿಟ್ಟುಹೋದರು.

ಧಾರಾಕಾರ ಮಳೆ ಸುರಿಯುತ್ತಿತ್ತು. ವಿಪರೀತ ಚಳಿ ಇತ್ತು. ಇಂಥ ಸ್ಥಿತಿಯಲ್ಲೇ ರೋಗಿ ಹಾಗೂ ಅವರ ತಾಯಿ ಅರ್ಧ ತಾಸು ಕಾಯಬೇಕಾಯಿತು.

ADVERTISEMENT

ನಂತರ ಬಂದ ಆಂಬುಲೆನ್ಸ್ ಸಿಬ್ಬಂದಿ ಸುರಿಯುವ ಮಳೆಯಲ್ಲೇ ಮಹಿಳೆಯನ್ನು ಸ್ಥಳಾಂತರ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.