ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಚಿತ್ರಾ ಚಲನಚಿತ್ರದ ಹಿಂಭಾಗದಲ್ಲಿ ತಾಲ್ಲೂಕಿನ ಕಂಗ್ರಾಳಿಯ ಪ್ರಭಾಕರ ಪಾಟೀಲ ಎಂಬಾತನನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿ, ₹1,070 ನಗದು ವಶಕ್ಕೆ ಪಡೆದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮಾರ್ಗದ ರಸ್ತೆಯಲ್ಲಿ ಶಹಾಪುರದ ಬಸವನ ಗಲ್ಲಿಯ ಗೌತಮ ಜೈನ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,500 ನಗದು ವಶಕ್ಕೆ ಪಡೆಯಲಾಗಿದೆ.
ಅನಗೋಳದ ಅಂಬೇಡ್ಕರ್ ಕೆರೆ ಬಳಿ ಭಜಂತ್ರಿ ಗಲ್ಲಿಯ ಶಂಕರ ಭಜಂತ್ರಿ, ಸಂಜೀವ ಭಜಂತ್ರಿ ಎಂಬುವವರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹810 ನಗದು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ: ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಬುಧವಾರ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಹಾಪುರದ ಮಲ್ಲಿಕಾರ್ಜುನ ಮೇದಾರ, ಶ್ರೀರಾಮ ಪೋಟೆ, ಓಂ ಅಪ್ಟೇಕರ, ಸ್ವಪ್ನಿಲ್ ದೇಸಾಯಿ, ವಿನಾಯಕ ಗವಳಿ, ರಾಜು ಬಾಳೇಕುಂದ್ರಿ, ವಡಗಾವಿಯ ಸಾಯಿರಾಜ ಬಿರ್ಜೆ, ಅನಿಕೇತ ಡೋಲೇಕಾರ ಬಂಧಿತರು. ಅವರಿಂದ ₹7,700 ನಗದು ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.