ADVERTISEMENT

Belagavi Rains: ಗೋಕಾಕ ಲೋಳಸೂರು ಸೇತುವೆ ಮುಳುಗಡೆ

ಮತ್ತಷ್ಟು ಹೆಚ್ಚಿದ ಘಟಪ್ರಭಾ, ಮಾರ್ಕಂಡೇಯ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:50 IST
Last Updated 20 ಆಗಸ್ಟ್ 2025, 5:50 IST
   

ಗೋಕಾಕ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಬುಧವಾರ ಬೆಳಿಗ್ಗೆಯಿಂದ ಮಳೆ‌ ತುಸು ಕಡಿಮೆಯಗಿದೆ. ಆದರೆ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ನೀರಿನಮಟ್ಟ ಮತ್ತಷ್ಟು ಏರಿಕೆ ಕಂಡಿದೆ.

ಹಿಡಕಲ್ಲಿನ ರಾಜಾ ಲಖಮಗೌಡ ಜಲಾಶಯದಿಂದ ನಿರಂತರವಾಗಿ 35,462 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಮಳೆ, ಬಳ್ಳಾರಿ ನಾಲೆಯ‌ ನೀರು ಸೇರಿಕೊಂಡು ನದಿ ಮತ್ತಷ್ಟು ಉಕ್ಕಿ‌ ಹರಿಯುತ್ತಿದೆ.

ಇದೇ ನೀರಿನಿಂದಾಗಿ ಗೋಕಾಕ‌ ನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಬುಧವಾರ ಸಂಪೂರ್ಣ ಮುಳುಗಡೆಯಾಗಿದೆ. ನೀರು ಅಕ್ಕಪಕ್ಕದ ಹೊಲಗಳಿಗೂ ನುಗ್ಗಿದೆ.

ADVERTISEMENT

ಮಂಗಳವಾರ ಮುಳುಗಿದ ಗೋಕಾಕ ಬಳಿಯ ಶಿಂಗಳಾಪೂರ ಸೇತುವೆ ಮೇಲೆ ನೀರು ಮತ್ತಷ್ಟು ಏರಿದೆ. ಮಾರ್ಕಂಡೇಯ ‌ನದಿ‌ ನೀರೂ ಏರಿಕೆಯಾಗಿದ್ದು ಚಿಕ್ಕೋಳಿ ಸೇತುವೆ ಮುಳುಗಲು ಒಂದು ಅಡಿ ಮಾತ್ರ ಬಾಕಿ ಇದೆ. ಮುಂಜಾಗೃತಾ ಅಕ್ರಮವಾಗಿ ಸೇತುವೆ ಸಂಚಾರ ಬಂದ್ ಮಾಡಲಾಗಿದೆ. ಈ ಸೇತುವೆ ಗೋಕಾಕ ನಗರ ಹಾಗೂ ಗೋಕಾಕ ಜಲಪತಾಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.