ADVERTISEMENT

‘ದೇವರೇ ನನ್ನ ಅತ್ತೆ ಸಾಯಲಿ’: ಹುಲಿಕಾಂತೇಶ್ವರ ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:17 IST
Last Updated 22 ಫೆಬ್ರುವರಿ 2026, 1:17 IST
ಮುಗಳಖೋಡ ಸಮೀಪದ ಖಣದಾಳದ ಹುಲಿಕಾಂತೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿ ಹರಕೆ ಚೀಟಿಯಲ್ಲಿ ‘ದೇವರೇ ನನ್ನ ಕಷ್ಟ ದೂರ ಮಾಡು, ಮುಂದಿನ ಜಾತ್ರೆ ಬರುವಷ್ಟರಲ್ಲಿ ನನ್ನ ಅತ್ತೆ ಸಾಯಲಿ’ ಎಂದು ಬರೆಯಲಾಗಿದೆ
ಮುಗಳಖೋಡ ಸಮೀಪದ ಖಣದಾಳದ ಹುಲಿಕಾಂತೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿ ಹರಕೆ ಚೀಟಿಯಲ್ಲಿ ‘ದೇವರೇ ನನ್ನ ಕಷ್ಟ ದೂರ ಮಾಡು, ಮುಂದಿನ ಜಾತ್ರೆ ಬರುವಷ್ಟರಲ್ಲಿ ನನ್ನ ಅತ್ತೆ ಸಾಯಲಿ’ ಎಂದು ಬರೆಯಲಾಗಿದೆ   

ಮುಗಳಖೋಡ (ಬೆಳಗಾವಿ): ಪಟ್ಟಣ ಸಮೀಪದ ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವರ ಹುಂಡಿಯಲ್ಲಿ ವಿಚಿತ್ರ ಹರಕೆಯ ಚೀಟಿಯೊಂದು ಪತ್ತೆಯಾಗಿದೆ. ಬಿಳಿ ಹಾಳೆಯ ಮೇಲೆ ‘ದೇವರೇ ಮುಂದಿನ ಜಾತ್ರೆ ಬರುವಷ್ಟರಲ್ಲಿ ನನ್ನ ಅತ್ತೆ ಸಾಯಲಿ’ ಎಂಬ ಹರಕೆ ಬರೆದು, ಅದಕ್ಕೆ ₹100ರ ನೋಟು ಅಂಟಿಸಿ ಹುಂಡಿಗೆ ಹಾಕಿದ್ದಾರೆ.

ಖಣದಾಳದ ಹುಲಿಕಾಂತೇಶ್ವರ ಜಾತ್ರೆ ಫೆ.13ರಿಂದ 17ರವರೆಗೆ ಜರುಗಿತು. ಬಳಿಕ ದೇವಸ್ಥಾನ ಸಮಿತಿಯವರು ಹುಂಡಿ ಎಣಿಕೆ ಮಾಡಿದರು. ಅದರಲ್ಲಿ ಈ ವಿಚಿತ್ರ ಹರಕೆಯ ಚೀಟಿ ಪತ್ತೆಯಾಗಿದೆ.

‘ಎರಡು ಚೀಟಿಗಳು ಸಿಕ್ಕಿವೆ. ಒಂದರಲ್ಲಿ ದೇವರೆ ನನ್ನ ಕಷ್ಟಗಳನ್ನು ದೂರ ಮಾಡು ಎಂಬ ಬೇಡಿಕೆ ಇದೆ. ಇನ್ನೊಂದರಲ್ಲಿ ಅತ್ತೆ ಸಾಯಲಿ ಎಂಬ ಬೇಡಿಕೆ ಇದೆ. ಇದನ್ನು ಸೊಸೆ ಬರೆದಿದ್ದಾಳೋ, ಅಳಿಯ ಬರೆದಿದ್ದಾನೋ ಗೊತ್ತಿಲ್ಲ. ಇದೇ ಮೊದಲಬಾರಿಗೆ ಇಂಥ ವಿಚಿತ್ರ ಮನಸ್ಥಿತಿಯ ಚೀಟಿ ಹುಂಡಿಯಲ್ಲಿ ಸಿಕ್ಕಿದೆ’ ಎಂದು ಹುಲಿಕಾಂತೇಶ್ವರ ಕಮಿಟಿ ಅಧ್ಯಕ್ಷ ರಾಮಕೃಷ್ಣ ದಳವಾಯಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.