ADVERTISEMENT

ಬೆಳಗಾವಿ: ವಡಗಾವಿ ಮಂಗಾಯಿ ಜಾತ್ರೆ ಸರಳ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 14:40 IST
Last Updated 11 ಜೂನ್ 2020, 14:40 IST
ಬೆಳಗಾವಿ ವಡಗಾವಿ ಜಾತ್ರೆ (ಫೈಲ್ ಚಿತ್ರ)
ಬೆಳಗಾವಿ ವಡಗಾವಿ ಜಾತ್ರೆ (ಫೈಲ್ ಚಿತ್ರ)   

ಬೆಳಗಾವಿ: ಇಲ್ಲಿನ ವಡಗಾವಿಯಲ್ಲಿ ಶುಕ್ರವಾರದಿಂದ (ಜೂನ್ 12) ಆರಂಭಗೊಳ್ಳಲಿರುವ ಗ್ರಾಮದೇವತೆ ಮಂಗಾಯಿ ಜಾತ್ರಾ ಮಹೋತ್ಸವವನ್ನುಕೊರೊನಾ ಸೋಂಕಿನ ಭೀತಿಯಿಂದಾಗಿ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಂಚ ಮಂಡಳಿ ತಿಳಿಸಿದೆ.

‘ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಅಂತರ ಕಾಯ್ದುಕೊಂಡು ದೇವಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಹೇಳಿದೆ.

ಮಂಡಳಿಯ ಶಶಿಕಾಂತ ಚವಾಣ, ಅನಂತ ಚವಾಣ ಪಾಟೀಲ, ವಿನಾಯಕ ಚವಾಣ ಪಾಟೀಲ, ಯೋಗೇಶ ಪಾಟೀಲ ಭಾಗವಹಿಸಿದ್ದರು.

ADVERTISEMENT

ಹಿಂದಿನ ವರ್ಷಗಳಲ್ಲಿ ಈ ಜಾತ್ರೆಗೆ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.