ADVERTISEMENT

ಬೆಳಗಾವಿ: ತಡರಾತ್ರಿ ನಡುರಸ್ತೆಯಲ್ಲಿ ರಾಡ್‌ನಿಂದ ಹೊಡೆದು ಮಹಿಳೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:56 IST
Last Updated 6 ಆಗಸ್ಟ್ 2025, 5:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

–ಎ.ಐ ಚಿತ್ರ

ಬೆಳಗಾವಿ: ಇಲ್ಲಿನ ಸದಾಶಿವ‌ ನಗರದ ಲಕ್ಷ್ಮೀ‌ ಕಾಂಪ್ಲೆಕ್ಸ್ ಎದುರಿಗೆ ಮಂಗಳವಾರ ತಡರಾತ್ರಿ ಮಹಿಳೆಯೊಬ್ಬರನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.

ADVERTISEMENT

ನಗರದ ವಡ್ಡರವಾಡಿಯ ರಾಮನಗರದ ನಿವಾಸಿ ಮಹಾದೇವಿ ಕರೆನ್ನವರ (45)ಕೊಲೆಯಾದವರು.

ಮೆಸ್ ವೊಂದರಲ್ಲಿ ಕೆಲಸ ಮುಗಿಸಿ ರಾತ್ರಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಹಿಂದಿನಿಂದ ಬಂದ ವ್ಯಕ್ತಿ ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದ. ಗಂಭೀರ ಗಾಯಗೊಂಡ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.

ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ್ ಭರಮನಿ ರಾತ್ರಿಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಎಫ್ಎಸ್ಎಲ್ ತಂಡ ಸಿಬ್ಬಂದಿ, ಶ್ವಾನದಳ ಕೂಡ ಪರಿಶೀಲನೆ ನಡೆಸಿದೆ.

ಕೊಲೆಯಾದ ಸ್ಥಳ ಹಾಗೂ ಒಳಚಿತ್ರದಲ್ಲಿ ಮಹಿಳೆ

ಹಣಕಾಸಿನ ವ್ಯವಹಾರ ಕೊಲೆಗೆ ಕಾರಣವಾಗಿರಬಹುದು ಎಂದು ಕುಟುಂಬದವರು ಸಂದೇಹಪಟ್ಟಿದ್ದಾರೆ. ಆರೋಪಿ ಒಬ್ಬನನ್ನು ವಶಕ್ಕೆ ಪಡೆದಿದ್ದು, ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.