
 ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಖಾನಾಪುರ: ಖಾನಾಪುರ ತಾಲ್ಲೂಕಿನ ಐತಿಹಾಸಿಕ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನಲ್ಲಿ ಅಪರಿಚಿತರು ಗುಂಡು ಹಾರಿಸಿದ್ದು ಯುವಕ ಮೃತಪಟ್ಟಿದ್ದಾನೆ.
ಹಲಸಿ ನಿವಾಸಿ ಅಲ್ತಾಫ್ ಮಕಾನದಾರ (30) ಸಾವಿಗೀಡಾದವರು. ಕಾಡಂಚಿಗೆ ಇರುವ ರಸ್ತೆ ಪಕ್ಕದ ಮರಳು ತೆಗೆಯುವ ಸ್ಥಳದಲ್ಲಿ ಘಟನೆ ನಡೆದಿದೆ. ಗುಂಡು ನೇರವಾಗಿ ಯುವಕನ ಎದೆಭಾಗದ ಕೆಳಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ.
ಬೆಳಿಗ್ಗೆ ಯುವಕನ ಶವ ನೋಡಿದ ಮೇಲೆಯೇ ಗೊತ್ತಾಗಿದೆ. ಉತ್ತರ ವಲಯ ಐಜಿಪಿ ವಿಕಾಶಕುಮಾರ್ ವಿಕಾಶ್ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆ ಸಂಚಾರ ಬಂದ್ ಮಾಡಿದ್ದು, ಸ್ಥಳ ಮಹಜರು ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.