ADVERTISEMENT

ಬೆಳಗಾವಿ|ಕಳ್ಳತನ ಪ್ರಕರಣ: ಚಿನ್ನಾಭರಣ ಸೇರಿ ₹7.80 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 13:48 IST
Last Updated 2 ಅಕ್ಟೋಬರ್ 2024, 13:48 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಳಗಾವಿ: ಮನೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಬ್ಬ ಆರೋಪಿಯನ್ನು ಬುಧವಾರ ಬಂಧಿಸಿದ ಮಾರಿಹಾಳ ಠಾಣೆ ಪೊಲೀಸರು, ಚಿನ್ನಾಭರಣ ಸೇರಿದಂತೆ ಒಟ್ಟು ₹7.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ‍ಪಡೆದಿದ್ದಾರೆ.

ADVERTISEMENT

ಬೆಳಗಾವಿ ತಾಲ್ಲೂಕಿನ ಚಂದೂರ ಗ್ರಾಮದ ಬಸಪ್ಪ ಮಾರುತಿ ಕರಕಾಳಿ ಬಂಧಿತ. ಮೋದಗಾ, ಹೊನ್ನಿಹಾಳ, ಹುದಲಿ, ಖನಗಾಂವ ಕೆ.ಎಚ್. ಗ್ರಾಮಗಳಲ್ಲಿ ಹಲವು ಮನೆಗಳಲ್ಲಿ ಕಳ್ಳತನ ನಡೆಸಿದ ಆರೋಪಿ.

ಪಿಎಸ್‌ಐಗಳಾದ ಮಂಜುನಾಥ ನಾಯಕ ಹಾಗೂ ಚಂದ್ರಶೇಖರ. ಕಾನ್‌ಸ್ಟೆಬಲ್‌ಗಳಾದ ಬಿ.ಎನ್.ಬಳಗನ್ನವರ, ಬಿ.ಬಿ.ಕಡ್ಡಿ. ಹನಮಂತ ಯರಗುದ್ರಿ, ಟಿ.ಜಿ. ಸುಳಕೋಡ, ಚನ್ನಪ್ಪ ಹುಣಚ್ಯಾಳ, ಆರ್.ಎಚ್. ತಳವಾರ ಕಾರ್ಯಾಚರಣೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.