ADVERTISEMENT

ಉಗರಗೋಳ: ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 7:13 IST
Last Updated 29 ಆಗಸ್ಟ್ 2024, 7:13 IST
<div class="paragraphs"><p>ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಅವರು ತಮ್ಮ ತಾಯಿ ಬಸಮ್ಮ ಹರಕೆಯಂತೆ, ಯಲ್ಲಮ್ಮನಗುಡ್ಡ– ಉಗರಗೋಳ ಮಾರ್ಗದಲ್ಲಿ ಮಹಾದ್ವಾರ ನಿರ್ಮಿಸಲು ಬುಧವಾರ ಭೂಮಿಪೂಜೆ ನೆರವೇರಿಸಿದರು</p></div>

ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಅವರು ತಮ್ಮ ತಾಯಿ ಬಸಮ್ಮ ಹರಕೆಯಂತೆ, ಯಲ್ಲಮ್ಮನಗುಡ್ಡ– ಉಗರಗೋಳ ಮಾರ್ಗದಲ್ಲಿ ಮಹಾದ್ವಾರ ನಿರ್ಮಿಸಲು ಬುಧವಾರ ಭೂಮಿಪೂಜೆ ನೆರವೇರಿಸಿದರು

   

ಉಗರಗೋಳ: ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಅವರು ತಮ್ಮ ತಾಯಿ ಬಸಮ್ಮ ಅವರ ಹರಕೆಯಂತೆ, ಯಲ್ಲಮ್ಮನಗುಡ್ಡ– ಉಗರಗೋಳ ಮಾರ್ಗದಲ್ಲಿ ₹40 ಲಕ್ಷ ವೆಚ್ಚದಲ್ಲಿ ಮಹಾದ್ವಾರ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಯಲ್ಲಮ್ಮ ನಮ್ಮ ಕುಲದೇವತೆ. ನಮ್ಮ ಕುಟುಂಬಕ್ಕೆ ಒಳಿತಾದರೆ ಮಹಾದ್ವಾರ ನಿರ್ಮಿಸಿಕೊಡುವುದಾಯಿ ತಾಯಿ ಹರಕೆ ಹೊತ್ತಿದ್ದರು. ಅದರಂತೆ ಕಾಮಗಾರಿ ಆರಂಭಿಸಿದ್ದೇನೆ’ ಎಂದರು.

ADVERTISEMENT

ಐ.ಎಸ್. ಪಾಟೀಲ, ಈರಮ್ಮ ಪಾಟೀಲ, ಅಣ್ಣರ್ಪೂಮ್ಮ ನಾಡಗೌಡ್ರ, ಕೆ.ಕೆ. ಪಾಟೀಲ, ಎಸ್.ಎಂ. ಗೌಡರ, ಶರಣಬಸಪ್ಪ ಗುಡಿಮನಿ, ಶಿದ್ಲಿಂಗಪ್ಪ ಚಲಗೇರಿ, ಶಿವಾನಂದ ಬಳ್ಳಾರಿ, ವೀರಯ್ಯ ಸೋಮನಕಟ್ಟಿ ಮಠ, ಪ್ರೊ.ವೀರೇಶ ಹಿತ್ತಲಮನಿ, ಆರ್.ಜಿ. ಚಿಕ್ಕಮಠ, ಶಿದ್ದಿಗೇರಿ ಅಕ್ಕಿ, ಬಸವರಾಜ ನವಲಗುಂದ, ನಾಗರಾಜ ಬಡೆಪ್ಪನವರ, ಹನಮಂತ ಶಿದ್ದಕ್ಕನವರ, ಸಂತೋಷ ಕಲಾಲ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.