ADVERTISEMENT

ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 8:23 IST
Last Updated 28 ಜನವರಿ 2026, 8:23 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಘಟಪ್ರಭಾ (ಗೋಕಾಕ): ಬೈಕ್‌ ಸವಾರನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ತೀವ್ರ ರಕ್ತಸ್ತಾವದಿಂದಾಗಿ ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ಹಿಂಬದಿಯಲ್ಲಿ ಕುಳಿತಿದ್ದ ಸವಾರನ ತಲೆಗೂ ಗಂಭೀರ ಗಾಯವಾದ ಘಟನೆ ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಹಳ್ಳದ ಸೇತುವೆ ಮೇಲೆ ಈಚೆಗೆ ನಡೆದಿದೆ.

ಮೃತನನ್ನು ಕಲ್ಲೋಳಿಯ ಭೀಮಶಿ ಮುತ್ತೆಪ್ಪ ಬೀರಗೌಡರ (28) ಎಂದು ಗುರ್ತಿಸಲಾಗಿದ್ದರೆ, ಗಾಯಾಳುವನ್ನು ಕಲ್ಲೋಳಿಯ ಮಹಾಂತೇಶ ‍ಶ್ರೀಕಾಂತ ಮಠಪತಿ (27) ಎಂದು ಗುರುತಿಸಲಾಗಿದೆ.

ADVERTISEMENT

ಘಟನೆ ಕುರಿತು ಮೃತನ ತಂದೆ ಮುತ್ತೆಪ್ಪ ಪುಂಡಲೀಕ ಬೀರಗೌಡ್ರ ಎಂಬುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಘಟಪ್ರಭಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.