
ಘಟಪ್ರಭಾ (ಗೋಕಾಕ): ಮೂವರು ಸವಾರಿ ಮಾಡುತ್ತಿದ್ದರು ಎನ್ನಲಾದ ದ್ವಿಚಕ್ರ ವಾಹನವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿ ಇನ್ನೊಬ್ಬ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸವಾರನ ಕೈ ಮತ್ತು ಕಾಲು ತುಂಡರಿಸಿದೆ. ಘಟಪ್ರಭಾ-ಗೋಕಾಕ ರಸ್ತೆಯ ಪರಮೇಶ್ವರವಾಡಿ ಬಳಿ ಸೋಮವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.
ಮೃತರನ್ನು ತಾಲ್ಲೂಕಿನ ಮಲ್ಲಾಪೂರ ಪಿಜಿ ಗ್ರಾಮದ ಶ್ರೇಯಸ್ ಉದಯ ಪತ್ತಾರ (19), ಘಟಪ್ರಭಾದ ಯಲ್ಲಪ್ಪ ಆನಂದ ಕೋಳಿ (20) ಎಂದು ಮತ್ತು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳವನ್ನು ಘಟಪ್ರಭಾ ನಿವಾಸಿ ವಿನಾಯಕ ಕೆಂಪಣ್ಣ ಹಾದಿಮನಿ ಎಂದು ಗುರುತಿಸಲಾಗಿದೆ.
ಮೂವರು ಯುವಕರು ಮಿತ್ರನೋರ್ವನ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಘಟಪ್ರಭಾದಿಂದ ಮೂಡಲಗಿ ತಾಲ್ಲೂಕಿನ ಶಿವಾಪೂರ ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.