ADVERTISEMENT

ಯರಗಟ್ಟಿ: ಕಾರ್‌ ಡಿಕ್ಕಿ- ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 13:59 IST
Last Updated 15 ಆಗಸ್ಟ್ 2022, 13:59 IST
   

ಯರಗಟ್ಟಿ (ಬೆಳಗಾವಿ ಜಿಲ್ಲೆ): ಪಟ್ಟಣ ಹೊರವಲಯದಲ್ಲಿ ಬೆಳಗಾವಿ– ಬಾಗಲಕೋಟೆ ರಸ್ತೆಯ ಮೇಲೆ ಸೋಮವಾರ ಬೈಕ್ ಮತ್ತು ಕಾರ್‌ ನಡುವೆ ಡಿಕ್ಕಿ ಸಂಭವಿಸಿ, ಬೈಕ್‌ ಸವಾರ ಮೃತಪಟ್ಟಿದ್ದಾರೆ.

ನೂರ್‌ಬೇಗ್‌ ಖಾಜಿ ಮೃತಪಟ್ಟವರು. ಅವರ ಊರು ತಿಳಿದುಬಂದಿಲ್ಲ. ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಯರಗಟ್ಟಿ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರಗೋಡ ಸಿಪಿಐ ಮೌನೇಶ್ವರ ಮಾಲಿಪಾಟೀಲ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.