ADVERTISEMENT

ಬೈಕ್‌ ಕಳವು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 2:55 IST
Last Updated 16 ಜನವರಿ 2026, 2:55 IST
ವಶಪಡಿಸಿಕೊಂಡ ದ್ವಿಚಕ್ರ ವಾಹನ ವಾಹನಗಳೊಂದಿಗೆ ಪಿಎಸ್ಐ ಎಸ್.ಎಸ್. ನರಸಪ್ಪನವರ ಮತ್ತು ಪೊಲೀಸ್ ಸಿಬ್ಬಂದಿ
ವಶಪಡಿಸಿಕೊಂಡ ದ್ವಿಚಕ್ರ ವಾಹನ ವಾಹನಗಳೊಂದಿಗೆ ಪಿಎಸ್ಐ ಎಸ್.ಎಸ್. ನರಸಪ್ಪನವರ ಮತ್ತು ಪೊಲೀಸ್ ಸಿಬ್ಬಂದಿ   

ನಿಪ್ಪಾಣಿ: ಪೆಟ್ರೊಲಿಂಗ್‌ನಲ್ಲಿ ಕಾರ್ಯನಿರತ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ₹1.10 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಪಿಎಸ್ಐ ಎಸ್.ಎಸ್. ನರಸಪ್ಪನವರ, ಎಎಸ್ಐ ಎಂ.ಜಿ. ಮುಜಾವರ ಮತ್ತು ಕಾನ್‌ಸ್ಟೆಬಲ್‌ ವಿ.ವಿ. ಕಂಗ್ರಾಳಕರ ಜ.13ರಂದು ಸಂಜೆ 5ಕ್ಕೆ ಪೆಟ್ರೊಲಿಂಗನಲ್ಲಿದ್ದಾಗ, ನಗರದ ಹೊರವಲಯದಲ್ಲಿರುವ ಗವಾಣಿ ಕ್ರಾಸ್ ಬಳಿ ಆರೋಪಿ ಬೆಳಗಾವಿ ತಾಲ್ಲೂಕಿನ ಅಗಸಗಾ ಗ್ರಾಮದ ಸೋಮನಾಥ ಪುಂಡಲಿಕ ಮೇಣಸೆ (21) ದ್ವಿಚಕ್ರ ವಾಹನ ತಳ್ಳಿಕೊಂಡು ಬರುತ್ತಿದ್ದ. ವಿಚಾರಿಸಿದಾಗ ಅದು ಕಳ್ಳತನದ್ದು ಎಂದು ಗೊತ್ತಾಗಿ ಬಂಧಿಸಲಾಗಿದೆ.

ಅವನಿಂದ ಮತ್ತೊಬ್ಬ ಆರೋಪಿ ಅಗಸಗಾ ಗ್ರಾಮದ ಜ್ಯೋತಿಬಾ ಯಲ್ಲಪ್ಪ ದಾಮಣೆಕರ (23)ನನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.