
ಪ್ರಜಾವಾಣಿ ವಾರ್ತೆ
ಬೆಳಗಾವಿ: ರಾಜಸ್ಥಾನದ ಜೈಪುರದಲ್ಲಿ ಜೈನ ಸೋಷಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದಾದಿಚಿ ದೇಹದಾನ ಸಮಿತಿ ಆಶ್ರಯದಲ್ಲಿ ಆ.16ರಿಂದ 18ರ ವರೆಗೆ ನಡೆಯಲಿರುವ ರಾಷ್ಟ್ರೀಯ ದೇಹದಾನ ಮತ್ತು ಅಂಗಾಂಗ ದಾನ ಜಾಗೃತಿಯ ಸಮಾವೇಶಕ್ಕೆ ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಆಯ್ಕೆಯಾಗಿದ್ದಾರೆ.
ವಿವಿಧ ರಾಜ್ಯಗಳ 52ಕ್ಕೂ ಅಧಿಕ ಸಂಘ–ಸಂಸ್ಥೆಗಳ ವೈದ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.