ADVERTISEMENT

ಹೆಜ್ಜೇನು ಕಡಿತ : ಬಿಜೆಪಿ ಕಾರ್ಯಕರ್ತರ ಸಭೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 16:10 IST
Last Updated 28 ಮಾರ್ಚ್ 2024, 16:10 IST
ಜೇನು ಹುಳದ ಕಾಟಕ್ಕೆ ಅಂಗಿ ಕಳಚಿ ಕೊಡವಿದ ಯಮಕನಮರಡಿಯ ದಡ್ಡಿ ಗ್ರಾಮದ ಬಿಜೆಪಿ ಕಾರ್ಯಕರ್ತ ಪ್ರಸಾದ ಪಾಗನೀಸ್
ಜೇನು ಹುಳದ ಕಾಟಕ್ಕೆ ಅಂಗಿ ಕಳಚಿ ಕೊಡವಿದ ಯಮಕನಮರಡಿಯ ದಡ್ಡಿ ಗ್ರಾಮದ ಬಿಜೆಪಿ ಕಾರ್ಯಕರ್ತ ಪ್ರಸಾದ ಪಾಗನೀಸ್   

ಯಮಕನಮರಡಿ: ಹೆಜ್ಜೇನು ಕಾಟಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತರ ಗುರುವಾರ ಇಲ್ಲಿನ ಸಭೆಯನ್ನೇ ಸ್ಥಳಾಂತರ ಮಾಡಬೇಕಾಯಿತು.

ಗ್ರಾಮದ ಬಿ.ಬಿ.ಹಂಜಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಬೇಕಿತ್ತು. ಸಭೆಗೆ ಮುನ್ನ ಕೆಲವರಿಗೆ ಹೆಜ್ಜೇನು ಹುಳ ಕಡಿದಿದ್ದು, ಅದನ್ನು ಗಮನಿಸಿ ಸಭೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಯಿತು.

ಬಿಜೆಪಿ ಕಾರ್ಯಕರ್ತರ ಸಭೆಯ ಅರ್ಧಗಂಟೆ ಮುಂಚಿತವಾಗಿ ಮತಕ್ಷೇತ್ರದ ನೂರಾರು ಕಾರ್ಯಕರ್ತರು ಸಭೆಗೆ ಬಂದಿದ್ದರು. ಉತ್ತರ ಪಕ್ಷದ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಚುನಾವಣೆ ವಿಕ್ಷಕರಾದ ಹೊಳೆಪ್ಪಾ, ಪಿಡಿಒ ರಾಜು ಬೇಡಸೂರ, ರವಿ ಹಂಜಿ, ದಡ್ಡಿ ಗ್ರಾಮದ ಕಾರ್ಯಕರ್ತ‌ ಪ್ರಸಾದ ಪಾಗನೀಸ್ ಮತ್ತು ಕೆಲವರಿಗೆ ಜೇನ್ನೊಣ ಕಡಿದವು. ಕೆಲವರು ತಪ್ಪಿಸಿಕೊಳ್ಳಲು ಮೈದಾನದಲ್ಲಿ ಓಡಿದರು. ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.