
ಪ್ರಜಾವಾಣಿ ವಾರ್ತೆ
ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಭಾನುವಾರ ಸಂಜೆ ಒಂದು ಕೃಷ್ಣಮೃಗ ಮೃತಮೃಟ್ಟಿದ್ದು, ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
‘ಸ್ಥಳೀಯ ಪಶುವೈದ್ಯರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಅದರ ಅಂತ್ಯಕ್ರಿಯೆ ನಡೆಸಿದ್ದೇವೆ’ ಎಂದು ಮೃಗಾಲಯದ ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ‘ಪ್ರಜಾವಾಣಿ’ಗೆ ತಿಳಿಸಿದರು.
ಗುರುವಾರ 8, ಶನಿವಾರ ನಸುಕಿನ ಜಾವ 20 ಕೃಷ್ಣಮೃಗ ಸಾವನ್ನಪ್ಪಿದ್ದವು. ಶನಿವಾರ ತಡರಾತ್ರಿ ಒಂದು ಪ್ರಾಣಿ ಮೃತಪಟ್ಟಿತ್ತು.
38ರ ಪೈಕಿ ಎಂಟು ಕೃಷ್ಣಮೃಗಗಳಷ್ಟೇ ಈಗ ಬದುಕುಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.