ADVERTISEMENT

ಕೆಎಲ್‌ಎಸ್ ಜಿಐಟಿಯಲ್ಲಿ ಬಿ.ಎಸ್ಸಿ. ಪದವಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 6:06 IST
Last Updated 15 ಅಕ್ಟೋಬರ್ 2021, 6:06 IST
ಬೆಳಗಾವಿಯ ಜಿಐಟಿಯಲ್ಲಿ ಬಿ.ಎಸ್ಸಿ. ಪದವಿ ಆರಂಭಿಸುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಪ್ರದೀಪ ಸಾವಕಾರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈಚೆಗೆ ಬೆಂಗಳೂರಿನಲ್ಲಿ ಸ್ವೀಕರಿಸಿದರು
ಬೆಳಗಾವಿಯ ಜಿಐಟಿಯಲ್ಲಿ ಬಿ.ಎಸ್ಸಿ. ಪದವಿ ಆರಂಭಿಸುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಪ್ರದೀಪ ಸಾವಕಾರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈಚೆಗೆ ಬೆಂಗಳೂರಿನಲ್ಲಿ ಸ್ವೀಕರಿಸಿದರು   

ಬೆಳಗಾವಿ: ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು 2021-22ರ ಶೈಕ್ಷಣಿಕ ವರ್ಷದಿಂದ 4 ವರ್ಷಗಳ ಬಿ.ಎಸ್ಸಿ. ಪದವಿ ಪರಿಚಯಿಸಲು ಸಿದ್ಧವಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗಸಂಸ್ಥೆಯ ಅಡಿಯಲ್ಲಿ ಪದವಿ ನೀಡಲಾಗುವುದು.

ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಪ್ರದೀಪ ಸಾವಕಾರ ಅವರು ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)–2020 ಅನುಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅಧಿಕೃತ ಅನುಮತಿ ಪ್ರಮಾಣಪತ್ರ ಪಡೆದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಇದ್ದರು.

‘ಈ ಶೈಕ್ಷಣಿಕ ವರ್ಷದಿಂದ ಬಿ.ಎಸ್ಸಿ. ಪದವಿ ನೀಡಲು ಅನುಮತಿ ಪಡೆದಿರುವ ಕರ್ನಾಟಕದಲ್ಲಿ ಕೆಲವೇ ಸಂಸ್ಥೆಗಳಲ್ಲಿ ಜಿಐಟಿ ಒಂದಾಗಿದೆ. ನ್ಯಾಕ್‌ ಹಾಗೂ ಎನ್‌ಬಿಎ ಮಾನ್ಯತೆ ಆಧರಿಸಿ ಆಯ್ಕೆ ಮಾಡಲಾಗಿದೆ’ ಎಂದು ಪ್ರಾಂಶುಪಾಲ ಡಾ.ಜಯಂತ ಕಿತ್ತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.