ADVERTISEMENT

ಗೋಕಾಕನತ್ತ ಹೊರಟಿದ್ದ ಬಸ್ ಪಲ್ಟಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 14:25 IST
Last Updated 16 ಜುಲೈ 2023, 14:25 IST
ಕೌಜಲಗಿ ಸಮೀಪದ ಕಪರಟ್ಟಿ ಗ್ರಾಮದ ಕೆರೆ ಹತ್ತಿರ ಸಾರಿಗೆ ಬಸ್ಸು ರಸ್ತೆ ಪಕ್ಕಕ್ಕೆ ಪಲ್ಟಿಯಾದ ದೃಶ್ಯ.
ಕೌಜಲಗಿ ಸಮೀಪದ ಕಪರಟ್ಟಿ ಗ್ರಾಮದ ಕೆರೆ ಹತ್ತಿರ ಸಾರಿಗೆ ಬಸ್ಸು ರಸ್ತೆ ಪಕ್ಕಕ್ಕೆ ಪಲ್ಟಿಯಾದ ದೃಶ್ಯ.   

ಕೌಜಲಗಿ: ಸಮೀಪದ ಕಪರಟ್ಟಿ ಗ್ರಾಮದ ಕೆರೆ ಹತ್ತಿರ ಗೋಕಾಕನತ್ತ ಹೊರಟಿದ್ದ ಗೋಕಾಕ ಸಾರಿಗೆ ಘಟಕದ ಬಸ್‌ ರಸ್ತೆ ಪಕ್ಕಕ್ಕೆ ಉರುಳಿದೆ.

ಬಸ್‌ ಚಾಲಕನ ಪಕ್ಕದ ಟೈಯರ್ ಒಡೆದಿದ್ದರಿಂದ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಬಸ್ಸು ಸ್ವಲ್ಪ ಮುಂದಕ್ಕೆ ಸಾಗಿದ್ದರೆ ಸಮೀಪದಲ್ಲಿ ಕೆರೆ ಇದೆ. ಕೆರೆಯಲ್ಲಿ ನೀರಿಲ್ಲ, ಆದರೆ ಕಂದಕಕ್ಕೆ ಉರುಳಿದ್ದರೆ ಹೆಚ್ಚಿನ ಅನಾಹುತಗಳು ಆಗುವ ಸಾಧ್ಯತೆಗಳಿದ್ದವು ಎಂದು ಪ್ರಯಾಣಿಕರು ತಿಳಿಸಿದರು.

Extra Photo-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT