
ಕಾಗವಾಡ ಕ್ಷೇತ್ರದ ಮಧಬಾವಿ ಗ್ರಾಮದಲ್ಲಿ ಮುಖಂಡ ವಿನಾಯಕ ಬಾಗಡಿ ಹಾಗೂ ಕಾರ್ಯಕರ್ತರು ಶಾಸಕ ರಾಜು ಕಾಗೆ ಅವರನ್ನು ಸನ್ಮಾನಿಸಿದರು
ಕಾಗವಾಡ: ‘ಸಚಿವ ಸಂಪುಟ ವಿಸ್ತರಣೆ ಆಗುವುದು ಖಚಿತ. ಅಧಿವೇಶನದ ನಂತರ ಇಲ್ಲ ಅದರ ಮುಂಚಿತವಾಗಿ ಆಗುಬಹುದು. ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಬೆಂಗಳೂರಿಗೆ ತೆರಳಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತೇನೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಸಿದ್ದೇವಾಡಿ, ಮದಭಾವಿ ಗ್ರಾಮದಲ್ಲಿ ಸುಮಾರ 40 ಲಕ್ಷ ವೆಚ್ಚದ ಎರಡು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಸ್ವತಂತ್ರ್ಯ ಸಿಕ್ಕಾಗಿನಿಂದಲೂ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೆ ಬಂದಿದೆ. ಈ ವಿಷಯದಲ್ಲಿ ರಾಜಕೀಯವೆನು ಇಲ್ಲ. ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬಂದರೂ ಉತ್ತರ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ಹಾಗೂ ರಾಜಕೀಯ ವಿಚಾರವಾಗಿಯೂ ಅನ್ಯಾಯ ಮಾಡುತ್ತವೆ. ದಿವಂಗತ ಉಮೇಶ ಕತ್ತಿ ಬಳಿಕ ನಾನು ಈ ಭಾಗದ ಹಿರಿಯ ರಾಜಕೀಯ ನಾಯಕ ಆದ್ದರಿಂದ ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಆಶ್ಚರ್ಯಕರವೇನಲ್ಲ’ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ ಬಾಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕೋರೆ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಜಗುಣಿ ಮಗದುಮ್ಮ, ಮುಖಂಡರಾದ ಅಶೋಕ ಪೂಜಾರಿ, ಕೆ.ಆರ್. ಪಾಟೀಲ, ಶಿವಾನಂದ ಮಗದುಮ್ಮ, ಸಂಜಯ ಅದಾಟೆ, ಶಿವಾನಂದ ಇಬ್ರಾಹಿಮಪುರ, ಸಿದರಾಯ ತೋಡಕರ, ರಾವಸಾಬ ಚೌಗಲಾ, ಅಶೋಕ ಸೂರ್ಯವಂಶಿ, ಅಸ್ಲಂ ಮುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.