ADVERTISEMENT

3 ವರ್ಷಗಳಿಂದಲೂ ಸಿಗದ ನೇಮಕಾತಿ ಆದೇಶ!

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 13:20 IST
Last Updated 26 ಡಿಸೆಂಬರ್ 2020, 13:20 IST
ಎಸ್‌ಡಿಎ ಹಾಗೂ ಎಫ್‌ಡಿಎ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮಗೆ ಆದೇಶಪತ್ರವನ್ನು ಕೊಡಿಸುವಂತೆ ಆಗ್ರಹಿಸಿ ಗೋಕಾಕ ಎನ್.ಎಸ್.ಎಫ್. ಅತಿಥಿ ಗೃಹದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಗೆ ಮನವಿ ಸಲ್ಲಿಸಿದರು
ಎಸ್‌ಡಿಎ ಹಾಗೂ ಎಫ್‌ಡಿಎ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮಗೆ ಆದೇಶಪತ್ರವನ್ನು ಕೊಡಿಸುವಂತೆ ಆಗ್ರಹಿಸಿ ಗೋಕಾಕ ಎನ್.ಎಸ್.ಎಫ್. ಅತಿಥಿ ಗೃಹದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಗೆ ಮನವಿ ಸಲ್ಲಿಸಿದರು   

ಗೋಕಾಕ: ‘2017ನೇ ಸಾಲಿನಲ್ಲಿ ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ನಮಗೆ ಕೂಡಲೇ ನೇಮಕಾತಿ ಆದೇಶ ಪತ್ರ ಕೊಡಿಸಬೇಕು’ ಎಂದು ಆಗ್ರಹಿಸಿ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭ್ಯರ್ಥಿಗಳು ಮನವಿ ಸಲ್ಲಿಸಿದರು.

ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಶನಿವಾರ ಶಾಸಕರ ಆಪ್ತಸಹಾಯಕರಾದಲಕ್ಕಪ್ಪ ಲೋಕುರಿ ಮತ್ತು ನಿಂಗಪ್ಪ ಕುರಬೇಟ ಅವರಿಗೆ ಮನವಿ ನೀಡಿದರು.

‘ಮೂಲ ದಾಖಲಾತಿ ಪರಿಶೀಲನೆ ಮುಗಿದಿದೆ. ಆದರೆ, ಆರ್ಥಿಕ ಇಲಾಖೆಯು ನೇಮಕ ಪ್ರಕ್ರಿಯೆ ತಡೆಹಿಡಿದಿದೆ. ಇದೇ ಅಧಿಸೂಚನೆಯಲ್ಲಿ ಆಯ್ಕೆಯಾದ ನ್ಯಾಯಾಂಗ ಇಲಾಖೆಯ ಹುದ್ದೆಗಳಿಗೆ 428 ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಾತಿ ಪತ್ರ ನೀಡಲಾಗಿದೆ. ಉಳಿದ 44 ಇಲಾಖೆಗಳ ಆಯ್ಕೆಯಾದ 1,414 ಮಂದಿಗೆ ಆದೇಶ ಪತ್ರಗಳನ್ನು ನೀಡಲು ಆರ್ಥಿಕ ಇಲಾಖೆ ಇದುವರೆಗೂ ಒಪ್ಪಿಗೆ ನೀಡಿಲ್ಲ. ಇದರಿಂದ ನೊಂದಿರುವ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.

ADVERTISEMENT

ರಮೇಶ ಖಾನಪ್ಪನವರ, ಪ್ರಕಾಶ ದ್ಯಾಮಕ್ಕಗೋಳ, ವಿದ್ಯಾಶ್ರೀ ರೆಡ್ಡಿ, ಸಿದ್ದಾರೂಢ ಹುಕ್ಕೇರಿ, ರಾಮಸಿದ್ದಪ್ಪ ಕೊತಲಿ, ಸಂಜು ಗುಗ್ಗರಿ, ವಿಠ್ಠಲ ಗೌಡನ್ನವರ, ಮಲ್ಲಪ್ಪ ಖಿಲಾರಿ, ಸುರೇಶ ಭಾಗೋಜಿ, ಕರುಣಾನಿಧಿ ರಾಯಬಾಗಕರ, ಉಮೇಶ ಪೋಳ, ಸುನೀತಾ ಮೆಳವಂಕಿ, ಶಿವಪುತ್ರ ಮೂಡಲಗಿ, ಇಕ್ಬಾಲ್ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.