
ಅಥಣಿ: ಭಾರತದ ಇತಿಹಾಸದಲ್ಲಿ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನಕ್ಕೆ ಪ್ರತೀಕವಾಗಿ ಬೆಳಗಿದ ಮಹಾನ್ ಯೋಧ ಛತ್ರಪತಿ ಶಿವಾಜಿ ಮಹಾರಾಜರು ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದರು.
ನಗರದ ಶಿವಾಜಿ ವೃತ್ತದಲ್ಲಿ ಭಾನುವಾರ ಶಿವಪ್ರತಿಷ್ಠಾನ ಹಿಂದೂಸ್ತಾನ ಘಟಕ ಹಾಗೂ ತಾಲ್ಲೂಕು ಏಕಛತ್ರ ಮರಾಠಾ ಸಮಾಜ ಸಂಘದ ಸಂಯುಕ್ತಾಶ್ರಯದಲ್ಲಿ ಭೋಜರಾಜ ಕ್ರಿಡಾಂಗಣದಲ್ಲಿ ನಡೆದ ಧ್ವಜಸ್ತಂಭಕ್ಕೆ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮಾತನಾಡಿ, ಶಿವಾಜಿ ಮಹಾರಾಜರು ನ್ಯಾಯಯುತ ಆಡಳಿತ, ಪ್ರಜಾಕಲ್ಯಾಣ ಮತ್ತು ಧರ್ಮ ನಿರಪೇಕ್ಷತೆಯ ಪ್ರತೀಕವಾಗಿದ್ದರು. ಅವರು ಕಟ್ಟಿದ ಸ್ವರಾಜ್ಯ ಕೇವಲ ಒಂದು ಸಾಮ್ರಾಜ್ಯವಲ್ಲ, ಅದು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆ ಸಂಕೇತವಾಗಿತ್ತು ಎಂದು ಹೇಳಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು ಎಂದು ಸರ್ಕಾರ ಮಸೂದೆ ಮಾಡುತ್ತಿದೆ. ಅದರಲ್ಲಿ ಮೊದಲು ನಾನೆ ಸಿಗಬಹುದು. ಆದರೆ ಹೇಗೆ ಹೊರಗೆ ಬರಬೇಕೆಂದು ನನಗೆ ಗೊತ್ತು. 2028 ಜೆಸಿಬಿ ಪಕ್ಷ ಕಟ್ಟಿ 143 ಸ್ಥಾನಗಳಲ್ಲಿ ಗೆದ್ದು ಬರುತ್ತೇನೆ, ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ , ಭ್ರಷ್ಟರನ್ನು ಅಧಿಕಾರದಿಂದ ದೂರ ಇಡುವ ಕಾಲ ಬಂದಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ಲಕ್ಷ್ಮಣ ಸವದಿ, ಮಾಜಿ ಸಚಿವ ಪಿ.ಜಿ.ಆರ್ ಸಿಂಧಿಯಾ, ಮರಾಠಾ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ, ಸಂಬಾಜಿರಾವ ವಿನಾಯಕ ಗೂರುಜಿ ಮಾತನಾಡಿದರು.
ಲೋಕಸಭಾ ಸದಸ್ಯ ಶಾಹು ಛತ್ರಪತಿ ಮಹಾರಾಜ, ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಸ್ಥಾಪಕ ಸಂಭಾಜಿ ವಿನಾಯಕ ಭೀಡೆ ಗುರೂಜಿ, ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಕವಲಗುಡ್ಡದ ಸಿದ್ದಯೊಗಿ ಅಮರೇಶ್ವರ ಮಹಾರಾಜರು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ, ಶಾಸಕರಾದ ರಮೇಶ ಜಾರಕಿಹೊಳಿ, ವಿಕ್ರಮಸಿಂಗ ಸಾವಂತ, ಸಮಾಧಾನ ಅವತಾಡೆ, ಮಾರುತಿರಾವ ಮೂಳೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ದಿಗ್ವಿಜಯ ಪವಾರದೇಸಾಯಿ, ಅರವಿಂದ ದೇಶಪಾಂಡೆ, ಅಪ್ಪಾಸಾಬ ಅವತಾಡೆ, ಗಜಾನನ ಮಂಗಸೂಳಿ, ರಾವಸಾಹೇಬ ದೇಸಾಯಿ, ವಿನಾಯಕ ದೇಸಾಯಿ, ಬಾಹುಸಾಬ ಜಾಧವ ಇದ್ದರು.