ಯಮಕನಮರಡಿ: ಮನೆಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಮರಳು ತುಂಬಿದ ಟಿಪ್ಪರ್ ಹರಿದು ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಇಸ್ಲಾಂಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಅಕ್ಷಯ ನಾಸಿಪುಡಿ (3) ಮೃತ ಮಗು.
ಟಿಪ್ಪರ್ ಶಹಾಬಂದರನಿಂದ ವಂಟಮೂರಿ ಗ್ರಾಮದತ್ತ ತೆರಳುತ್ತಿತ್ತು. ಅಪಘಾತದಿಂದ ಹೆದರಿದ ಜಾಲಕ ಪರಾರಿಯಾಗಿದ್ದಾನೆ. ಪಾಲಕರ ಆಕ್ರಂದನ ಹೇಳ ತೀರದಾಗಿತ್ತು.
‘ನಿತ್ಯ ಅತಿ ವೇಗದಿಂದ ಟಿಪ್ಪರ್ ಹೋಗುತ್ತವೆ. ರಸ್ತೆ ಅಕ್ಕ ಪಕ್ಕ ಚಾಲಕರ ಗಮನ ಇರುವುದಿಲ್ಲ’ ಎಂದು ಮಗುವಿನ ತಂದೆ ಆರೋಪಿಸಿದರು.
ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.