ADVERTISEMENT

ಮಕ್ಕಳ ಸಹಾಯವಾಣಿಯಿಂದ ಸೇವೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 11:45 IST
Last Updated 31 ಮಾರ್ಚ್ 2020, 11:45 IST

ಬೆಳಗಾವಿ: ‘ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಅಪಾಯದಲ್ಲಿ ಸಿಲುಕುವ ಸಂದರ್ಭಗಳು ಇರುವುದರಿಂದ ‘ಮಕ್ಕಳ ಸಹಾಯವಾಣಿ ಭಾರತ ಪ್ರತಿಷ್ಠಾನ’ದ ನಿರ್ದೇಶನದಂತೆ ಸಹಾಯವಾಣಿ (1098) ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ನಗರದಲ್ಲಿ ಮಕ್ಕಳ ಸಹಾಯವಾಣಿ (1098) ಯೋಜನೆಯು 2012ರ ಅಕ್ಕೋಬರ್‌ನಲ್ಲಿ ಜಾರಿಯಲ್ಲಿದ್ದು, ಯುನೈಟೆಡ್ ಸಮಾಜಕಲ್ಯಾಣ ಸಂಸ್ಥೆಯು ಈ ಯೋಜನೆಯನ್ನು ಅನುಷ್ಠಾನಗೂಳಿಸುತ್ತಿದೆ ಎಂದು ಸಂಯೋಜಕ ಎಂ.ಕೆ. ಕುಂದರಗಿ ತಿಳಿಸಿದ್ದಾರೆ.

ತರಕಾರಿ ಮಾರಾಟಕ್ಕೆ ವ್ಯವವ್ಥೆ

ADVERTISEMENT

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಪ್ಪಿಸಲು ಇಲ್ಲಿನ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಜನಸಂದಣಿ ತಗ್ಗಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ರೈತರ ಉತ್ಪನ್ನಗಳು ಉತ್ತಮ ಬೆಲೆಗೆ ಮಾರಾಟವಾಗಲು ಪ್ರಾಂಗಣದಲ್ಲಿ ಹಂಚಿಕೆ ಮಾಡಲಾಗಿದ್ದ ಅಂಗಡಿ ಮಳಿಗೆಗಳನ್ನು ಮರು ಹಂಚಿಕೆ ಮಾಡಿ ಸ್ಥಳಾಂತರಿಸಲಾಗಿದೆ.

ನಗರವಾಸಿಗಳಿಗೆ ತರಕಾರಿ ಪೂರೈಸಲು ಅವರ ಮನೆ ಬಾಗಿಲಿಗೆ ತೋಟಗಾರಿಕೆ ಇಲಾಖೆ, ಖಾಸಗಿ ಮತ್ತು ಎಪಿಎಂಸಿ ಅಧ್ಯಕ್ಷರು ಒಟ್ಟಾರೆ 40 ವಾಹನಗಳನ್ನು ಗುರುತಿಸಿ ವಾರ್ಡ್‌ಗಳಿಗೆ ಅನುಗುಣವಾಗಿ ಪ್ರತಿದಿನ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಗಟು ಹಸಿ ಮೆಣಸಿನಕಾಯಿ ಮಾರುವ ರೈತರು ಮತ್ತು ಖರೀದಿದಾರರ ಅನುಕೂಲಕ್ಕಾಗಿ ಕಿತ್ತೂರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮತ್ತು ಬೆಳಗಾವಿಯ ಎಪಿಎಂಸಿಯ ಜಾನುವಾರು ಮಾರುಕಟ್ಟೆ ಜಾಗದಲ್ಲಿ ವಹಿವಾಟು ನಡೆಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಯೇ ವಹಿವಾಟು ನಡೆಸಬೇಕು ಎಂದು ತಿಳಿಸಲಾಗಿದೆ.

ಖರೀದಿದಾರರು ಹೊರ ರಾಜ್ಯಗಳಿಗೆ ಯಾವುದೇ ಅಡೆತಡೆಯಿಲ್ಲದೆ ಸಗಟು ತರಕಾರಿ ರವಾನಿಸಬಹುದಾಗಿದೆ. ಪರವಾನಗಿ ಅವಶ್ಯವಿದ್ದಲ್ಲಿ ಎಪಿಎಂಸಿಯಿಂದ ನೀಡಲಾಗುವುದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.