ಹುಕ್ಕೇರಿ: ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೌಕರರ ಕಾಲೊನಿ ಪಕ್ಕದ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ (ರುದ್ರಭೂಮಿ) ಜಾಗವನ್ನು ಸಮುದಾಯದ ಜನರು ಭಾನುವಾರ ಸ್ವಚ್ಛಗೊಳಿಸಿದರು.
ಬಜಾರ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಯ ಲಿಂಗಾಯತ ಒಳಪಂಗಡ ಸಮುದಾಯದ ಜನರು ಬೆಳಿಗ್ಗೆ ಸ್ಮಶಾನ ಭೂಮಿಗೆ ಬಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು.
ಸ್ಮಶಾನದಲ್ಲಿ ಬೆಳೆದಿದ್ದ ಮುಳ್ಳು ಕಂಟಿ, ಗಿಡಗಂಟಿ, ಹುಲ್ಲು ಸೇರಿದಂತೆ ಕುರುಚಲ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ಒಣಗಿದ ಗಿಡದ ಬೊಡ್ಡೆ ದಂಡೆಗೆ ಸಾಗಿಸುವ, ತಗ್ಗು ಪ್ರದೇಶವನ್ನು ಜೆಸಿಬಿ ಮೂಲಕ ತುಂಬುವ ಕಾರ್ಯ ಮಾಡಿದರು. ಒಣಗಿದ ಎಲ್ಲ ಗಿಡಗಂಟಿ, ಮುಳ್ಳುಕಂಟಿಗಳನ್ನು ಸುಟ್ಟು ಹಾಕಿ ಇಡೀ ಸ್ಮಶಾನ ಸ್ವಚ್ಛಗೊಳಿಸಿದರು.
ಮುಂದಿನ ದಿನಗಳಲ್ಲಿ ಸ್ಮಶಾನದಲ್ಲಿ ಬಿಲ್ವಪತ್ರಿ ಮತ್ತು ವಿವಿಧ ಹೂವು ಬಿಡುವ ಸಸಿಗಳನ್ನು ನೆಡುವುದಾಗಿ ಹಿರಿಯರು ತಿಳಿಸಿದರು. ಸೇವೆ ಸಲ್ಲಿಸಲು ಬಂದಿದ್ದ ಜನರಿಗೆ ಸಿಹಿ ಸಹಿತ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.