ಬೆಳಗಾವಿ: ‘ಸಮ್ಮಿಶ್ರ ಸರ್ಕಾರ ಎಂದರೆಕಾಶ್ಮೀರದಲ್ಲಿರುವ ಎಲ್‌ಒಸಿ (ಲೈನ್ ಆಫ್ ಕಂಟ್ರೋಲ್) ಇದ್ದಂತೆ. ಎಚ್ಚರದಿಂದಿರುವವರು ಪಾರಾಗುತ್ತಾರೆ. ಎಚ್ಚರ ತಪ್ಪಿದವರುಸಮಸ್ಯೆಗೆ ಸಿಲುಕುತ್ತಾರೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎದುರಾಳಿಗಳು ವೈಫಲ್ಯದ ಲಾಭ ಪಡೆಯಲು ಕಾಯುತ್ತಿರುತ್ತಾರೆ. ನಾವು ಎಚ್ಚರದಿಂದಿರಬೇಕು’ ಎಂದರು.
‘ಆಪರೇಶನ್ ಕಮಲ ಎಂಬುದು ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುವವರೆಗೂ ನಡೆಯುತ್ತಲೇಇರುತ್ತದೆ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಯಶಸ್ವಿಯಾಗಿ ತನ್ನ ಅವಧಿ ಪೂರೈಸಲಿದೆ. ಸಹೋದರ ರಮೇಶ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿಲ್ಲ. ಸಿಕ್ಕರೆ ಅವರ ಸಮಸ್ಯೆ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಸಿದ್ಧಗಂಗಾ ಶ್ರೀಗೆ ಭಾರತರತ್ನ
‘ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶ್ರೇಷ್ಠ ಆರ್ಥಿಕ ತಜ್ಞ ಹಾಗೂ ಮಾದರಿ ರಾಜಕಾರಣಿಯಾಗಿದ್ದು, ಅವರಿಗೆ ಭಾರತರತ್ನ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ಪ್ರಶಸ್ತಿ ನೀಡಬೇಕಾಗಿತ್ತು. ರಾಜ್ಯ ಸರ್ಕಾರದಿಂದ ಶಿಫಾರಸ್ಸು ಕೂಡ ಮಾಡಲಾಗಿತ್ತು. ಆದರೆ, ಈ ಸಲ ಸಿಗಲಿಲ್ಲ. ಮುಂದಿನ ಬಾರಿಯಾದರೂ ಅವರಿಗೆ ಸಿಗಲಿ’ ಎಂದು ಅವರು ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.