ADVERTISEMENT

ಗಮನಸೆಳೆದ ಜೋಡೆತ್ತಿನ ಚಕ್ಕಡಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 13:54 IST
Last Updated 16 ಮಾರ್ಚ್ 2021, 13:54 IST
ಕಡಬಿ ಗ್ರಾಮದಲ್ಲಿ ಮಡಿವಾಳೇಶ್ವರ ಜಾತ್ರೆ ಪ್ರಯುಕ್ತ ನಡೆದ ಜೋಡೆತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆಯ ನೋಟ
ಕಡಬಿ ಗ್ರಾಮದಲ್ಲಿ ಮಡಿವಾಳೇಶ್ವರ ಜಾತ್ರೆ ಪ್ರಯುಕ್ತ ನಡೆದ ಜೋಡೆತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆಯ ನೋಟ   

ಕಡಬಿ: ಇಲ್ಲಿನ ಮಡಿವಾಳೇಶ್ವರ ಜಾತ್ರೆ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಜೋಡೆತ್ತಿನ ಚಕ್ಕಡಿ ಮತ್ತು ಕುದುರೆ ಗಾಡಿ ಓಡಿಸುವ ಸ್ಪರ್ಧೆಗಳನ್ನು ನಡೆಸಲಾಯಿತು.

ಕುದುರೆ ಗಾಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗೊರಗುದ್ದಿ ಗ್ರಾಮದ ಲಕ್ಕಪ್ಪ ಪೊತಲಿ ಪಡೆದರು. ದ್ವಿತೀಯ ಬಹುಮಾನವನ್ನು ಯರಗಟ್ಟಿಯ ಅಜಿತ ದೇಸಾಯಿ ಗಳಿಸಿದರು. ತೃತೀಯ ಬಹುಮಾನ ಗೋಕಾದ ಹಣಮಂತ ಹಮ್ಮನ್ನವರ ಗೆದ್ದರು.

ಜೋಡೆತ್ತಿನ ಸ್ಪರ್ಧೆಯಲ್ಲಿ ದಾನೊಳ್ಳಿ ಗ್ರಾಮದ ರಮೇಶ ಕಿಲಾರಿ, ಕೊಲ್ಹಾಪುರದ ರಂಜಿತ ಪಾಟೀಲ, ರಾಜು ಉಮರಾಣಿ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಗಳಿಸಿದರು. ಗ್ರಾಮದ ಹಿರಿಯರು ಹಾಗೂ ಜಾತ್ರಾ ಸಮಿತಿಯವರು ಬಹುಮಾನ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.