ADVERTISEMENT

ಸಚಿವೆ ಜೊಲ್ಲೆ, ಶಾಸಕ ಪರಣ್ಣ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 16:16 IST
Last Updated 26 ಜುಲೈ 2021, 16:16 IST

ಬೆಳಗಾವಿ: ಅಂಗನವಾಡಿಗಳಲ್ಲಿ ವಿತರಿಸುವ ಮೊಟ್ಟೆಗಳ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾದ ವರದಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ, ಚಿಕ್ಕೋಡಿಯ ಸಾಯಿನಗರ ನಿವಾಸಿ ಸಂಜಯ ಹರಗೆ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ವಿರುದ್ಧ ಇಲ್ಲಿನ ವಕೀಲ ಸುರೇಂದ್ರ ಉಗಾರೆ ಅವರು ಲೋಕಾಯುಕ್ತ ಎಸ್ಪಿ ಕಚೇರಿಗೆ ಸೋಮವಾರ ದೂರು ನೀಡಿದ್ದಾರೆ.

‘ಟೆಂಡರ್‌ನಲ್ಲಿ ಅಕ್ರಮ ಮಾಡಿರುವ ಗುರುತರ ಆರೋಪ ಸಚಿವರ ಮೇಲೆ ಬಂದಿದೆ. ಅಕ್ರಮವಾಗಿ ಹಣ ಪಡೆಯುವುದು ಅಪರಾಧ ಎನ್ನುವುದು ಗೊತ್ತಿದ್ದರೂ ಭ್ರಷ್ಟಾಚಾರ ಎಸಗಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿನ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕೂಡ ಸಚಿವೆ ಶಶಿಕಲಾ ಮತ್ತು ಶಾಸಕ ಪರಣ್ಣ ವಿರುದ್ಧ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುತರ ಆರೋಪ ಕೇಳಿಬಂದಿರುವುದರಿಂದಾಗಿ ಜೊಲ್ಲೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.