ADVERTISEMENT

ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 4:17 IST
Last Updated 23 ನವೆಂಬರ್ 2025, 4:17 IST
ರಾಯಬಾಗ ಪಟ್ಟಣದಲ್ಲಿ ಶನಿವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಂಸದ ಈರಣ್ಣ ಕಡಾಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರಾಯಬಾಗ ಪಟ್ಟಣದಲ್ಲಿ ಶನಿವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಂಸದ ಈರಣ್ಣ ಕಡಾಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.   

ರಾಯಬಾಗ: ‘ಈಚೆಗೆ ಕಾಂಗ್ರೆಸ್ ಒಳಜಗಳ ತೀವ್ರಗೊಂಡಿದೆ. ಇದು ನೇರವಾಗಿ ಆಡಳಿತದ ವೇಗ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಜನರ ಪರ ಕೆಲಸ ಮಾರುವುದನ್ನು ಬಿಟ್ಟು ಯಾರಿಗೆ ಯಾವ ಹುದ್ದೆ ಸಿಗಬೇಕು ಎಂಬ ಲಾಬಿ–ಪೈಪೋಟಿಯೇ ಈಗ ಸರ್ಕಾರದ ದಿನಚರಿಯಾಗಿದೆ’  ಎಂದು ಶಾಸಕ ಡಿ.ಎಂ. ಐಹೊಳೆ ಟೀಕಿಸಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಶನಿವಾರ ನಡೆದ ಏಕತಾ ನಡಿಗೆ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂಸದ ಈರಣ್ಣ ಕಡಾಡಿ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ವೈಫಲ್ಯ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಜನರ ಸಮಸ್ಯೆಗಳ ಪರಿಹಾರಕ್ಕಿಂತಲೂ ಅಧಿಕಾರದ ಹಪಾಹಪಿಯೇ ಕಾಂಗ್ರೆಸ್ ನಾಯಕರ ಪ್ರಮುಖ ಕಾರ್ಯವಾಗಿದೆ’ ಎಂದು ಕಿಡಿ ಕಾರಿದರು.

ADVERTISEMENT

ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಿ.ಎಂ. ಐಹೊಳೆ, ‘ದೇಶದ ಕನಸು ಸಾಕಾರಗೊಳಿಸಲು ಯುವಕರು ಶ್ರಮಿಸಬೇಕು. ದೇಶದ 560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿ ಒಂದೇ ಭಾರತವನ್ನಾಗಿಸಿದ ಕೀರ್ತಿ ಸರ್ದಾರ್‌ ವಲ್ಲಭಭಾಯಿ ಪಟೇಲ ಅವರಿಗೆ ಸಲ್ಲುತ್ತದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಬಿಜೆಪಿ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮಹೇಶ ಭಾತೆ, ದುಂಡಪ್ಪ ಭೆಂಡವಾಡೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ರಾಜಶೇಖರ ಖನದಾಳೆ, ಅರುಣ ಐಹೊಳೆ, ಬಸಗೌಡ ಪಾಟೀಲ, ಶಿವಾನಂದ ನವಲಿಹಾಳೆ, ರಾಜು ಹರಗನ್ನವರ, ಶಿವಾನಂದ ಐಹೊಳೆ, ಮಹೇಶ ಕರಮಡಿ, ರಾಕೇಶ ಅವಳೆ, ಅನಿಲ ಕೊರವಿ, ರಿತೇಶ್ ಅವಳೆ, ಸುಭಾಷ ಕಾಂಬಳೆ, ಪ್ರೇಮ ಸಾನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.