ಘಟಪ್ರಭಾ (ಗೋಕಾಕ): ‘ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು. ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೆ ರಾಜನಾಮೆಗೂ ಅವಕಾಶ ಕೊಡದೇ ಸಂಪುಟದಿಂದ ವಜಾಗೊಳಿಸಿರುವುದು ಪರಿಶಿಷ್ಠ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಖೇದ ವ್ಯಕ್ತಪಡಿಸಿದರು.
ಮಂಗಳವಾರ ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಸಂಸದರ ಸ್ಥಳೀಯ ನಗರಾಭಿವೃದ್ಧಿ ಯೋಜನೆ ಅಡಿ ನಿರ್ಮಿಸಲಾದ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆಯೂ ನಾಗೇಂದ್ರ ಅವರನ್ನು ಪರಿಶಿಷ್ಠ ಸಮುದಾಯದ ಹಣ ಲೂಟಿ ಮಾಡಿದ್ದಾರೆಂದು ಸಂಪುಟದಿಂದ ಕೈ ಬಿಡಲಾಗಿತ್ತು. ಆದರೆ ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ಬಳಸಿಕೊಂಡು ಹಿಂದುಳಿದ ವರ್ಗದ ಸಚಿವರನ್ನು ಕೈ ಬಿಟ್ಟು ಎಸ್.ಟಿ. ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
‘ಮುಖ್ಯವಾಗಿ ತೆರೆಯ ಹಿಂದೆ ಯಾರು ನಿಂತು ಇದೆಲ್ಲವನ್ನು ರಾಜಣ್ಣನವರಿಂದ ಹೇಳಿಸಿದ್ದರೋ ಅವರೆ ಇಂದು ರಾಜಣ್ಣನವರ ಬೆನ್ನಿಗೆ ನಿಲ್ಲದಿರುವುದು ಆ ಸಮುದಾಯದ ದುರ್ದೈವ’ ಎಂದು ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಅವರಿಗೆ ಚುಚ್ಚಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಕುಲಕರ್ಣಿ, ಪರಶುರಾಮ ಕಲಕುಟಗಿ, ಅರುಣ ದೇಶಪಾಂಡೆ, ಮಹಾದೇವ ದೇಶಪಾಂಡೆ, ಮುರಳಿದರ ಜತ್ತಕರ್, ಶ್ರೀಕಾಂತ ಮಹಾಜನ, ಸಂತೋಷ ದೇಶಪಾಂಡೆ, ಸೋಮಶೇಖರ ಹುದ್ದಾರ, ರಘುವೀರ ಪಾಟೀಲ, ರಾಘವೇಂದ್ರ ದೇಶಪಾಂಡೆ, ಮಹಾಂತೇಶ ಉದಗಟ್ಟಿಮಠ, ರಾಜು ಕತ್ತಿ, ಆನಂದ ಪೂಜಾರಿ, ಭೀಮಶಿ ಬಂಗಾರಿ, ವಿಠ್ಠಲ ಹುಕ್ಕೇರಿ, ಡಾ. ವಿಲಾಸ ನಾಯಿಕವಾಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.