ADVERTISEMENT

ಸಂಜಯ ಪಾಟೀಲ ಅವಹೇಳನಕಾರಿ ಹೇಳಿಕೆ; ಕ್ಷಮೆಯಾಚನೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:18 IST
Last Updated 5 ಅಕ್ಟೋಬರ್ 2021, 3:18 IST
ಬೈಲಹೊಂಗಲದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಬೈಲಹೊಂಗಲದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಬೈಲಹೊಂಗಲ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕುರಿತು ಲಘುವಾಗಿ ಹೇಳಿಕೆ ನೀಡಿರುವ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರ ವಿರುದ್ಧ ಪ್ರತಿಭಟನೆ ಮಾಡಿದಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು, ಪ್ರತಿಕೃತಿ ದಹನ ಮಾಡಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಅಸಂಬದ್ಧ ಹೇಳಿಕೆ ನೀಡಿರುವ ಸಂಜಯ ಪಾಟೀಲ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ನಾಯಕ ಸಂಜಯ ಪಾಟೀಲ ಅವರು ನಮ್ಮ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಇದು ಸ್ತ್ರೀಯರಿಗೆ ಮಾಡಿರುವ ಅಪಮಾನ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ, ವಕೀಲ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಲಕ್ಷ್ಮಿ ಹೆಬ್ಬಾಳಕರ ಅವರ ಜನಪ್ರಿಯತೆ, ಜನಪರ ಕಾರ್ಯ ಸಹಿಸಿಕೊಳ್ಳದೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಬಿಜೆಪಿ ಪಕ್ಷ, ಸಂಜಯ ಪಾಟೀಲ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ತಾಲ್ಲೂಕು ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ, ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸದಸ್ಯರಾದ ರಾಜಶೇಖರ ಮೂಗಿ, ರಾಜು ಜನ್ಮಟ್ಟಿ, ಉಳವಪ್ಪ ಬಡ್ಡಿಮನಿ, ಕೆ.ಐ.ಮುಲ್ಲಾ, ನಿಸಾರಅಹ್ಮದ ತಿಗಡಿ, ಬಸವರಾಜ ಕೌಜಲಗಿ, ಈರಣ್ಣಾ ಬೆಟಗೇರಿ, ವಿರುಪಾಕ್ಷ ವಾಲಿ, ಈರಣ್ಣಾ ಸಂಪಗಾಂವ, ಚಂದು ಹೊಸೂರ, ಆನಂದ ವಾಲಿ, ಹಸನ್ ಗೊರವನಕೊಳ್ಳ, ಮಾರುತಿ ಶರೆಗಾರ, ಪ್ರಕಾಶ ಬಳಗಾರ, ಅಶೋಕ ಹುದ್ದಾರ, ಮಲ್ಲಪ್ಪ ಗರ್ಜೂರ, ಕಾರ್ತಿಕ ಪಾಟೀಲ, ಈರಪ್ಪ ಹತ್ತಿಕಟಗಿ, ಪ್ರವೀಣ ಬೋಡಕಿ, ಸಂತೋಷ ಮಂಗಳಗಟ್ಟಿ, ರಮೇಶ ಪರಂಡಿ, ಎಸ್.ಕೆ.ಮೆಳ್ಳಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.