ADVERTISEMENT

ಸರ್ವರಿಗೂ ಸಮಬಾಳು ನೀಡಿರುವ ಸಂವಿಧಾನ: ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:37 IST
Last Updated 28 ನವೆಂಬರ್ 2021, 8:37 IST
ತೆಲಸಂಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿದಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ ಮಾತನಾಡಿದರು. ಉಪನ್ಯಾಸಕರಾದ ಕೆ.ಎಸ್. ಬಿಜ್ಜರಗಿ, ವಿಲಾಸ ಕಾಂಬಳೆ, ಗೋದಾವರಿ ಪಾಟೀಲ, ಶಿವಾನಂದ ಹಾಲೋಳ್ಳಿ, ಜ್ಯೋತಿ ಇದ್ದಾರೆ
ತೆಲಸಂಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿದಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ ಮಾತನಾಡಿದರು. ಉಪನ್ಯಾಸಕರಾದ ಕೆ.ಎಸ್. ಬಿಜ್ಜರಗಿ, ವಿಲಾಸ ಕಾಂಬಳೆ, ಗೋದಾವರಿ ಪಾಟೀಲ, ಶಿವಾನಂದ ಹಾಲೋಳ್ಳಿ, ಜ್ಯೋತಿ ಇದ್ದಾರೆ   

ತೆಲಸಂಗ: ‘ವಿಶ್ವದಲ್ಲೆ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ಒದಗಿಸಿದೆ’ ಎಂದು ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿದಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕಾಗಿ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ’ ಎಂದರು.

ADVERTISEMENT

ಪ್ರೊ.ವಿಶ್ವನಾಥ ಪಾಟೀಲ ಮಾತನಾಡಿ, ‘ಭಾರತ ಸಂವಿಧಾನದ ರಚನೆಯ ಸ್ವರೂಪವು ಎಲ್ಲರನ್ನೂ ಒಳಗೊಳ್ಳುವ ಮೌಲ್ಯ ಆಧರಿಸಿದೆ’ ಎಂದು ಹೇಳಿದರು.

ಉಪನ್ಯಾಸಕರಾದ ವಿಲಾಸ ಕಾಂಬಳೆ, ಗೋದಾವರಿ ಪಾಟೀಲ, ಜ್ಯೋತಿ, ಶಿವಾನಂದ ಹಾಲೋಳ್ಳಿ, ಕೆ.ಎಸ್. ಬಿಜ್ಜರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.