ADVERTISEMENT

ಅಂಬೇಡ್ಕರ್ ಭವನ ನಿರ್ಮಾಣ: ರವಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:50 IST
Last Updated 14 ಏಪ್ರಿಲ್ 2025, 13:50 IST
ಯಮಕನಮರಡಿ ಹತ್ತರಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸೋಮವಾರ ನಡೆದ ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು
ಯಮಕನಮರಡಿ ಹತ್ತರಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸೋಮವಾರ ನಡೆದ ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು   

ಯಮಕನಮರಡಿ: ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಅನುದಾನದಲ್ಲಿ ₹25ಲಕ್ಷ ವೆಚ್ಚದಲ್ಲಿ ಹತ್ತರಗಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಡಾ.ಅಂಬೇಡ್ಕರ್ ಸಮುದಾನ ಭವನವನ್ನು ಮಂಜೂರು ನೀಡಿದ್ದು, ನಿರ್ಮಿಸಲಾಗುವುದು ಎಂದು ಯಮಕನಮರಡಿ ಆರ್.ಸಿ.ಗ್ರಾಮದ ಯುವ ಧುರೀಣ ರವಿ ಜಿಂಡ್ರಾಳಿ ಹೇಳಿದರು.

ಸ್ಥಳೀಯ ಹತ್ತರಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸೋಮವಾರ ನಡೆದ ಬಿ.ಆರ್.ಅಂಬೇಡ್ಕರ್‌ ಅವರ 134ನೇ ಜಯಂತಿ ಅಂಗವಾಗಿ ಏರ್ಪಡಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದದರು. ಹತ್ತರಗಿ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ ಭೀಮಗೋಳ ಮತ್ತು ಆನಂದ ಮಗದುಮ್ಮ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಕೆಂಪಣ್ಣಾ ಬೇವಿನಕಟ್ಟಿ, ಶಂಕರ ಕಾಂಬಳೆ, ಕೆಂಪಣ್ಣಾ ಕಾಂಬಳೆ, ಆನಂದ ರಾಯಣ್ಣವರ, ಬಸವರಾಜ ಭೀಮಗೋಳ, ಬಾಬು ಅಗಸಿಮನಿ, ಗಣೇಶ ತಳವಾರ, ದುಂಡಪ್ಪಾ ದಾದುಗೋಳ, ಪ್ರಕಾಶ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT