ಹುಕ್ಕೇರಿ: ಜಿಲ್ಲಾ ಪಂಚಾಯಿತಿ ಬೆಳಗಾವಿಯ ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗು ತಾಲ್ಲೂಕು ಪಂಚಾಯಿತಿ ಮತ್ತು ಕೋಟ ಗ್ರಾಮ ಪಂಚಾಯಿತಿಯ ಜಲ ಜೀವನ ಮಿಷನ್ ಯೋಜನೆಯಡಿ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಂಸ್ಥಿಕರಣದ ಬಲವರ್ಧನೆಯ ಅಂಗವಾಗಿ ಬೆಳ್ಳಂಕಿ ಗ್ರಾಮವನ್ನು ನಿರಂತರ ನೀರು ಸರಬರಾಜು ಪೂರೈಕೆ ಗ್ರಾಮ ಎಂದು ಘೋಷಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಇಇ ಪಾಂಡುರಂಗರಾವ್ ಅವರು ಮಾತನಾಡಿ, ನಿರಂತರ ನೀರು ಸರಬರಾಜು ಯೋಜನೆಯ ಲಾಭ ಪಡೆಯಲು ಮತ್ತು ಭವಿಷ್ಯದಲ್ಲೂ ನೀರಿನ ಮಹತ್ವ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಒಟ್ಟು 393 ಜನಸಂಖ್ಯೆಯಿದ್ದು 128 ಮನೆಗಳಿವೆ. 50,000 ಲೀಟರ್ ಮೇಲ್ಮಟ್ಟದ ಜಲ ಸಂಗ್ರಹಣಾ ಸಾಮರ್ಥ್ಯದ ಕಾಮಗಾರಿಗೆ ಒಟ್ಟು ಒಟ್ಟು ₹38 ಲಕ್ಷ ವೆಚ್ಚ ತಗುಲಿದೆ ಎಂದು ಮಾಹಿತಿ ನೀಡಿದರು.
ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಪಾಟೀಲ, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಚಿನ ಶಿಂಧೆ, ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಹಾಯಕ ದಯಾನಂದ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್.ಮಲ್ಲಾಡದ, ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆ ಎಇಇ ವಿನಾಯಕ್ ಪೂಜಾರ್, ಸೆಕ್ಷನ್ ಆಫೀಸರ್ ಚೇತನ್ ಕಡಕೋಳ, ಅಭಿಷೇಕ್ ಪವಾರ್, ಸಂತೋಷ್ ಪಾಟೀಲ, ಜಿಲ್ಲಾ ಯೋಜನಾ ವ್ಯವಸ್ಥಾಪಕ ದೀಪಕ ಕಾಂಬಳೆ, ಡಿಟಿಎಸ್ ಮಲ್ಲಯ್ಯ ಮಠಪತಿ ಮತ್ತು ನವೀನ್, ಪಿಡಿಒ ಎಸ್.ಎಸ್.ಕಬ್ಬಗೋಳ, ನಾಗಯ್ಯ ಹಿರೇಮಠ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.