ಖಾನಾಪುರ: ತಾಲ್ಲೂಕಿನ ನಂದಗಡದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯುವ ದಿನವಾದ ಮಂಗಳವಾರ ಒಟ್ಟು 13 ಸ್ಥಾನಗಳಲ್ಲಿ 10 ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ ಮೂರು ಸ್ಥಾನಗಳಿಗೆ ಅ.12ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಅರವಿಂದ ಪಾಟೀಲ (ನಂದಗಡ), ಉದಯ ಪಾಟೀಲ (ಚಾಪಗಾವ), ಚಾಂಗಪ್ಪ ಬಾಚೋಳಕರ (ಇದ್ದಲಹೊಂಡ), ಜೆ.ವಿ ಭರಮಪ್ಪನವರ (ಅವರೊಳ್ಳಿ ), ದಾಮೋದರ ನಾಕಾಡಿ (ಬೈಲೂರು), ಪ್ರಕಾಶ ಗಾವಡೆ (ಗುಂಜಿ), ಶ್ರೀಶೈಲ ಮಾಟೊಳ್ಳಿ (ಲಿಂಗನಮಠ), ರಫೀಕ ಹಲಸೀಕರ (ದೇವರಾಯಿ), ತೇಜಸ್ವಿನಿ ಹೊಸಮನಿ (ಖಾನಾಪುರ), ಪಾರ್ವತಿ ಪಾಟೀಲ (ಕ.ನಂದಗಡ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಮೂರು ಸ್ಥಾನಗಳಿಗೆ ಭಾನುವಾರ ನಡೆಯಲಿರುವ ಮತದಾನದಲ್ಲಿ ಒಟ್ಟು 1,220 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.