ADVERTISEMENT

ಜಿಲ್ಲಾ ಕಾಂಗ್ರೆಸ್‌ನಿಂದ 50 ಜನರಿಗೆ ಉಚಿತ ಲಸಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 16:47 IST
Last Updated 7 ಜೂನ್ 2021, 16:47 IST
ಬೆಳಗಾವಿ ತಾಲ್ಲೂಕಿನ ಹಂದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋವಿಡ್-19 ಸಹಾಯವಾಣಿ ಸೇವಾ ಕೇಂದ್ರದಿಂದ ಕೋವಿಡ್ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು
ಬೆಳಗಾವಿ ತಾಲ್ಲೂಕಿನ ಹಂದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋವಿಡ್-19 ಸಹಾಯವಾಣಿ ಸೇವಾ ಕೇಂದ್ರದಿಂದ ಕೋವಿಡ್ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು   

ಬೆಳಗಾವಿ: ತಾಲ್ಲೂಕಿನ ಹಂದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋವಿಡ್-19 ಸಹಾಯವಾಣಿ ಸೇವಾ ಕೇಂದ್ರದಿಂದ ಕೋವಿಡ್ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಂಗ್ರಾಳಿ ಕೆ.ಎಚ್. ಹಾಗೂ ಹಂದಿಗನೂರು ಗ್ರಾಮದ 50 ಜನರು ಲಸಿಕೆ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನೀಡಿದರು. ಸೇವಾ ಕೇಂದ್ರದ ಸದಸ್ಯರಾದ ಜಗದೀಶ ಸಾವಂತ, ರಾಜೇಂದ್ರ ಪಾಟೀಲ, ಆನಂದ ವೈದ್ಯ, ವಿಶಾಲ ಪಾಟೀಲ, ಶಹೀನ ವೈದ್ಯ, ಮಂಜುಳಾ ಬಡಿಗೇರ, ಉತ್ತಮ ಚಿಟ್ಟಿ, ಸಾವಿತ್ರಿ ಲಿಂಬೋಜಿ, ಪಯಜಾ ವಂಟಮುರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.