ADVERTISEMENT

ಬೆಳಗಾವಿ: ಕೋವಿಡ್ ಸೋಂಕಿನಿಂದ 9 ಸಾವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 17:48 IST
Last Updated 17 ಆಗಸ್ಟ್ 2020, 17:48 IST

ಬೆಳಗಾವಿ: ಜಿಲ್ಲೆಯ 171 ಜನರಿಗೆ ಹೊಸದಾಗಿ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಸೋಂಕಿತರಾದವರ ಸಂಖ್ಯೆ 7,981ಕ್ಕೆ ತಲುಪಿದೆ. ಮೂವರು ಮಹಿಳೆಯರು ಸೇರಿದಂತೆ 9 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದುವರೆಗೆ ಒಟ್ಟು 130 ಜನರು ಮೃತರಾಗಿದ್ದಾರೆ.

ಬೆಳಗಾವಿಯ ಪಿ–173915, ಪಿ–233675, ಪಿ– 223320, ಪಿ–163966, ಪಿ– 229722, ಪಿ–206661, ಗೋಕಾಕದ ಪಿ–226701, ಪಿ–194925 ಹಾಗೂ ಚಿಕ್ಕೋಡಿಯ ಪಿ–151404 ಮೃತರಾಗಿದ್ದಾರೆ.

ಜಿಲ್ಲೆಯಲ್ಲಿ 3,652 ಸಕ್ರಿಯ ರೋಗಿಗಳು ಇದ್ದಾರೆ. 279 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದುವರೆಗೆ 4,199 ಜನರು ಗುಣಮುಖರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.