ADVERTISEMENT

ಬೆಳಗಾವಿ: ಕೋವಿಡ್‌–19ಗೆ ಮೂರನೇ ಬಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 17:14 IST
Last Updated 1 ಜುಲೈ 2020, 17:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೋವಿಡ್‌–19 ಮಾರಕ ರೋಗಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ 72 ವರ್ಷ ವಯಸ್ಸಿನ ವೃದ್ಧ (ಪಿ– 15272) ಬುಧವಾರ ಸಾವಿಗೀಡಾದರು. ಇವರ ಗಂಟಲು ದ್ರವದ ಮಾದರಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ವ್ಯಕ್ತಿಯ ಜೊತೆ ಸಂಪರ್ಕ ಇರುವವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೃತ ವ್ಯಕ್ತಿಯೂ ಸೇರಿದಂತೆ ಹೊಸದಾಗಿ ಎಂಟು ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 328ಕ್ಕೆ ತಲುಪಿದೆ. 11 ವರ್ಷದ ಬಾಲಕ (ಪಿ–15346) ಹಾಗೂ 12 ವರ್ಷದ ಬಾಲಕಿ (ಪಿ–15350) ಇದರಲ್ಲಿ ಸೇರಿದ್ದಾರೆ. ನಾಗಾಲ್ಯಾಂಡ್‌ನಿಂದ ಮರಳಿ ಬಂದಿರುವ 32 ವರ್ಷದ ಮಹಿಳೆಯಲ್ಲೂ (ಪಿ– 15349) ಸೋಂಕು ಕಾಣಿಸಿಕೊಂಡಿದೆ. 45 ವರ್ಷದ ಪುರುಷ (ಪಿ–15345) ಹಾಗೂ 58 ವರ್ಷದ ಪುರುಷರ (ಪಿ– 15348) ಸೋಂಕು ಸಂಪರ್ಕ ಪತ್ತೆಯಾಗಿಲ್ಲ. 40 ವರ್ಷ (ಪಿ–15347) ಹಾಗೂ 50 ವರ್ಷದ ಪುರುಷ (ಪಿ– 15351) ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ADVERTISEMENT

ಮೂವರು ಗುಣಮುಖ: ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 29 ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,253 ರೋಗಿಗಳ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.